- ಗೃಹ ಸಚಿವರಿಗೆ ಪರೋಕ್ಷ ಟಾಂಗ್ ನೀಡಿದ ಶಾಸಕ ರಾಜುಗೌಡ
ವಿಜಯಸಾಕ್ಷಿ ಸುದ್ದಿ, ಯಾದಗಿರಿ
ಯಾದಗಿರಿಯಲ್ಲಿ ಸಾಮೂಹಿಕ ಅತ್ಯಚಾರ ಘಟನೆ ಖಂಡಿಸಿರುವ ಸುರಪುರ ಶಾಸಕ ರಾಜೂಗೌಡ, ಮಹಾತ್ಮ ಗಾಂಧೀಜಿ ರಾತ್ರಿ 12 ಗಂಟೆಗೆ ಹೆಣ್ಣುಮಗಳು ನಿರ್ಭೀತಿಯಿಂದ ಹೊರಗೆ ತಿರುಗಾಡಿದರೆ ರಾಮರಾಜ್ಯ, ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಹೇಳಿದ್ದರು.
ಆದರೆ, ನಮ್ಮ ಕೆಲಸ ಮಾಡುವುದು ಬಿಟ್ಟು. ಇನ್ನೊಬ್ಬರ ಮೇಲೆ ಬೆರಳು ತೋರುವುದು ಸರಿಯಲ್ಲ ಎಂದು ಗೃಹವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ತಪ್ಪಾಗಿದೇಯಾ ? ಅದಕ್ಕೆ ನಾವು ಏನು ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎನ್ನುವುದು ಮುಖ್ಯ. ಅದು ಬಿಟ್ಟು ಅವರು ಅಲ್ಲಿ ಏಕೆ ಹೋಗಿದ್ದರು. ಇವರು ಅಲ್ಲಿ ಏಕೆ ಹೋಗಿದ್ದರು ಎಂದು ಪ್ರಶ್ನಿಸುವುದು ತಪ್ಪು. ನಮ್ಮ ಕರ್ತವ್ಯ ನಾವು ಸರಿಯಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ರಾತ್ರಿ 12 ಗಂಟೆಗೆ ಹೆಣ್ಣುಮಗಳು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ತಾಳೆ ಅಂದ್ರೆ ನಾವು ಹೆಮ್ಮೆ ಪಡಬೇಕು. ಅದನ್ನು ಬಿಟ್ಟು ಅಲ್ಲಿ ಏಕೆ ಹೋಗಿದ್ದಳು ಎಂದು ಕೇಳುವುದಲ್ಲ ಎಂದು ಹರಿಹಾಯ್ದರು.