Homecultureಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಯ ಪಾತ್ರ ಅನನ್ಯ : ಪುಷ್ಪಾ ನಾಗಾವಿ

ಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಯ ಪಾತ್ರ ಅನನ್ಯ : ಪುಷ್ಪಾ ನಾಗಾವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಒಂಬತ್ತು ತಿಂಗಳು ಹೊತ್ತು-ಹೆತ್ತು, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಲ್ಲಿ ಯಾರೂ ಇಲ್ಲ ಎಂದು ಕುರ್ತಕೋಟಿ ಗ್ರಾಮ ಪಂಚಾಯಿತಿ ಸದಸ್ಯ ಪುಷ್ಪಾ ನಾಗಾವಿ ಹೇಳಿದರು.

ಅವರು ಪಟ್ಟಣದಲ್ಲಿ ತಾಯಂದಿರ ದಿನಾಚರಣೆಯಲ್ಲಿ ತಾಯಂದಿರನ್ನು ಸನ್ಮಾನಿಸಿ ಮಾತನಾಡಿ, ತಾಯಂದಿರು ತಮ್ಮ ಜೀವನವನ್ನು ತನ್ನ ಮಕ್ಕಳಿಗಾಗಿ ಶ್ರಮಿಸಿ ಸಲುಹಿ ಸಾಕುವುದಲ್ಲದೇ ಅವರ ಭವಿಷ್ಯಕ್ಕೆ ಭದ್ರ ಬುನಾದಿಯಾಗಿ ಕೊನೆಯುಸಿರು ಇರುವವರೆಗೂ ಕಾಪಾಡುವವಳು ತಾಯಿ. ತಾಯಿ ಇಲ್ಲದೇ ಜೀವನ ನಡೆಸುವುದು ಅಸಾಧ್ಯ. ತಾಯಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು, ಪ್ರೀತಿಸಬೇಕು, ಅವರ ವೃದ್ಯಾಪ ಜೀವನದಲ್ಲಿ ಅವರನ್ನು ನಮ್ಮ ಮಕ್ಕಳಂತೆ ಸಲಹಬೇಕು ಎಂದರು.

ಸಾವಿತ್ರಿ ಮುಸ್ಕಿನಭಾವಿ, ಪಾರವ್ವ ಪಟ್ಟಣಶೇಟ್ಟಿ, ವಿಜಯಲಕ್ಷ್ಮಿ ಪಟ್ಟಣಶೆಟ್ಟಿ, ಶೋಭಾ ಸಿದ್ದನಗೌಡರ, ಜ್ಯೋತಿ ಬಡ್ನಿ, ಮಹೇಶ್ವರಿ ಶಿದ್ನಾಳ, ದೀಪಾ ಮುಸ್ಕಿನಭಾವಿ, ಸುಜಾತಾ ಅಂಗಡಿ, ಸಂಗೀತಾ ರೇವಣ್ಣವರ, ಜಯಶ್ರೀ ಯಲಿಗಾರ, ನೀಲಮ್ಮಾ ಇಚ್ಚಂಗಿ ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img