Homecultureಸಂಭ್ರಮದ ವರ ಮಹಾಲಕ್ಷ್ಮಿ ಪೂಜೆ

ಸಂಭ್ರಮದ ವರ ಮಹಾಲಕ್ಷ್ಮಿ ಪೂಜೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಮುಂಜಾನೆಯೇ ಮಡಿಯುಟ್ಟು ಮನೆ ಅಂಗಳ ಸಾರಿಸಿ ರಂಗೋಲಿ ಹಾಕಿ ಬಾಗಿಲುಗಳನ್ನು ಹೂವು, ತಳಿರು-ತೋರಣಗಳಿಂದ ಶೃಂಗರಿಸಿದ್ದರು. ಬಳಿಕ ಮನೆಗಳಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಒಡೆವೆಗಳಿಂದ ಅಲಂಕರಿಸಿ ಪೂಜಿಸಿದರು. ಪೂಜೆ ನಂತರ ಮುತ್ತೈದೆಯರಿಂದ ಮಹಾಲಕ್ಷ್ಮಿಗೆ ಆರತಿ ಬೆಳಗಿಸಿ ಉಡಿತುಂಬಿ, ಸಿಹಿ ಊಟ ಉಣಬಡಿಸಿದರು. ಹಬ್ಬದ ಪ್ರಯುಕ್ತ ಪಟ್ಟಣದ ಮಾರುಕಟ್ಟೆಯಲ್ಲಿ ಹಣ್ಣು, ಹೂ ಸೇರಿದಂತೆ ಪೂಜೆಗೆ ಬೇಕಾಗುವ ಸಾಮಗ್ರಿಗಳ ವ್ಯಾಪಾರ ಗರಿಗೆದರಿತ್ತು.

LEAVE A REPLY

Please enter your comment!
Please enter your name here

E-Paper

E-paper

Must Read

spot_img