HomeGadag Newsಶ್ರೀ ರಾಘವೇಂದ್ರ ಗುರುಗಳ ಆರಾಧನೆ ಸಂಭ್ರಮದ ಮಹಾರಥೋತ್ಸವ

ಶ್ರೀ ರಾಘವೇಂದ್ರ ಗುರುಗಳ ಆರಾಧನೆ ಸಂಭ್ರಮದ ಮಹಾರಥೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಗುರುವಾರ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಉತ್ತರಾರಾಧನೆ ಕಾರ್ಯಕ್ರಮ ಶೃದ್ಧಾಭಕ್ತಿಯಿಂದ ಜರುಗಿತು.

ಬೆಳಿಗ್ಗೆ ಅಷ್ಟೋತ್ತರ, ಪಂಚಾಮೃತ, ವಿಶೇಷ ಅಲಂಕಾರ ಮತ್ತು ವೀರನಾರಾಯಣ ದೇವಸ್ಥಾನದಿಂದ ಮಹಾರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಆರಾಧನೆಯ ನಿಮಿತ್ತ ಕಳೆದ ಮಂಗಳವಾರದಿಂದ ಮೂರು ದಿನಗಳ ಕಾಲ ಪ್ರಥಮಾರಾಧನೆ, ಮಧ್ಯಾರಾಧನೆ ನಿಮಿತ್ತ ಭಜನೆ, ವಿಶೇಷ ಪೂಜೆ, ಪಾರಾಯಣ ಹಾಗೂ ಉಪನ್ಯಾಸಗಳು ಜರುಗಿದವು.

ಬೆಳಿಗ್ಗೆ ಜರುಗಿದ ಮಹಾರಥೋತ್ಸವ ಸೇರಿದಂತೆ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಶ್ರೀ ಗುರು ರಾಯರ ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img