Homecultureಭೋಗೇಶ್ವರ ಸ್ವಾಮೀಜಿ ಕುಂಭಾಭಿಷೇಕ ಮಹೋತ್ಸವ

ಭೋಗೇಶ್ವರ ಸ್ವಾಮೀಜಿ ಕುಂಭಾಭಿಷೇಕ ಮಹೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ದೇವರು, ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ರಾ ಉಚ್ಚಂಗಿದುರ್ಗ ಕಟ್ಟೆಮನೆ ರಾಜಗುರು ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಜಂಗಮ ತುಂಬಿಗೆರೆ ಗ್ರಾಮದ ಭೋಗೇಶ್ವರ ಸ್ವಾಮೀಜಿ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ಕಂಪ್ಯೂಟರ್ ಯುಗದಲ್ಲಿ ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದೇವೆ. ಪೂಜೆ, ಪುನಸ್ಕಾರಗಳಿಂದ ಒತ್ತಡ ನಿವಾರಣೆಯಾಗಿ ಬದುಕಿಗೆ ಶಾಂತಿ ಪ್ರಾಪ್ತಿಯಾಗುತ್ತದೆ ಎಂದರು.

ಭೊಗೇಶ್ವರ ಸ್ವಾಮಿ ಆರಾಧನೆ ಅಂಗವಾಗಿ 108 ಪೂರ್ಣಕುಂಭ ಮೇಳ ನಡೆಯಿತು. ಗ್ರಾಮದ ಹೊರ ವಲಯದಲ್ಲಿರುವ ಹಾಲಸ್ವಾಮಿ ಮಠದಿಂದ ಆರಂಭವಾದ ಕುಂಭ ಮೇಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ವಾದ್ಯವೃಂದಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.

ಈ ಸಂದರ್ಭದಲ್ಲಿ ಹಡಗಲಿ ಹಾಲಸ್ವಾಮಿ, ತುಂಬಿಗೆರೆ ಶಿವಣ್ಣ, ರವೀಂದ್ರಪ್ಪ, ಗೀತಾ, ಮೇಘರಾಜ, ನಂಜಪ್ಪ, ಪರಶುರಾಮ, ಶಿವಕುಮಾರ್ ಸ್ವಾಮಿ, ಭೋಗೇಶ್ವರಯ್ಯ, ರವಿಕುಮಾರ್, ಸಿದ್ದಯ್ಯ, ರಾಮದೇವಯ್ಯ, ವಸಂತಕುಮಾರ್ ಮುಂತಾದವದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img