Homecultureಮಳೆಯ ನಡುವೆಯೇ ಭೂತಾಯಿಗೆ ಸೀಮಂತ

ಮಳೆಯ ನಡುವೆಯೇ ಭೂತಾಯಿಗೆ ಸೀಮಂತ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸೀಗಿ ಹುಣ್ಣಿಮೆಯಲ್ಲಿ ಉತ್ತರ ಕರ್ನಾಟಕ, ಬಯಲು ಸಿಮೆಯ ರೈತರು ಸಡಗರ-ಸಂಭ್ರಮದಿಂದ ಭೂತಾಯಿಗೆ ಸೀಮಂತ ಮಾಡಿ, ಉಡಿ ತುಂಬುವ ಮೂಲಕ ನಮಿಸುತ್ತಾರೆ.

ಗೋವಿನಜೋಳ, ಹತ್ತಿ, ಮೆಣಸಿನಕಾಯಿ ಬೆಳೆಗಳಿಂದ ತನ್ನ ಒಡಲನ್ನು ತುಂಬಿಕೊಂಡು ಭೂತಾಯಿ ಗರ್ಭ ಧರಿಸುತ್ತಾಳೆ.

ಭೂತಾಯಿಗೆ ಸೀಮಂತ ಮಾಡಿ ಬಯಕೆ ತೀರಿಸಬೇಕು ಎನ್ನುವ ಹಂಬಲದಿಂದ ಉತ್ತರ ಕರ್ನಾಟಕದ ರೈತ ಬಾಂಧವರು ಈ ಸೀಗಿ ಹುಣ್ಣಿಮೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ಪ್ರಸ್ತುತ ವರ್ಷ ಹಿಂಗಾರು ಮಳೆಯ ಹಸ್ತಾ ಹಾಗೂ ಚಿತ್ತಿ ಮಳೆ ಸತತವಾಗಿ ಸುರಿಯುತ್ತಿದ್ದು, ಮಳೆಯ ನಡುವೆಯೇ ರೈತ ಬಾಂಧವರು ಭೂತಾಯಿಗೆ ಸೀಮಂತ ಕಾರ್ಯ ನೆರವೇರಿಸಿದರು. ಹಸಿರು ಸೀರೆಯನ್ನು ಬನ್ನಿ ಮರಕ್ಕೆ ಉಡಿಸಿ, ಪಾಂಡವರ ಹಾಗೂ ಕಳ್ಳ ಕಲ್ಲು ಮೂರ್ತಿಗಳನ್ನು ಪೂಜಿಸುವ ಮೂಲಕ ಮಹಿಳೆಯರು ಸೇರಿದಂತೆ ಮಕ್ಕಳು ಭೂತಾಯಿಗೆ ಚರಗ ಚೆಲ್ಲುತ್ತಾ ನಮಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img