ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಾಧನೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಸಾಧನೆ ಮಾಡಲು ಸತತ ಅಧ್ಯಯನ ಮುಖ್ಯ ಎಂದು ನಿವೃತ್ತ ಶಿಕ್ಷಕ ಬಿ.ಜಿ. ಯಳವತ್ತಿ ಹೇಳಿದರು.
ಅವರು ಪಟ್ಟಣದ ಸಂಗನಪೇಟಿ ಓಣಿಯಲ್ಲಿ ದೇವಾಂಗ ವತಿಯಿಂದ ಎಸ್ಸೆಸ್ಸೆಲ್ಸಿ ಪರಿಕ್ಷೇಯಲ್ಲಿ ಶೇ.94.72 ಅಂಕ ಪಡೆದ ವಿದ್ಯಾರ್ಥಿ ಕಿರಣ ಕೆರಕನವರ ಅವರನ್ನು ಸನ್ಮಾನಿಸಿ ಮಾತನಾಡಿದರು.
ಇಂದು ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲಾ ವಿದ್ಯಾರ್ಥಿಗಳು ಓದುವುದು ಹೆಚ್ಚಾಗುತ್ತಿದ್ದು, ಮಕ್ಕಳು ಗುರುಗಳು ಹೇಳಿದ ಪಾಠಗಳನ್ನು ಸತತವಾಗಿ ಮನನ ಮಾಡಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಬಿ.ಜಿ. ಯಳವತ್ತಿ, ವಿರೂಪಾಕ್ಷಪ್ಪ ಹಾಳಕೇರಿ, ಸಂಜಯ ನೀಲಗುಂದ, ಪರಮೇಶಪ್ಪ ಯಳವತ್ತಿ, ಪರಮೇಶಪ್ಪ ಪಾತಾಳಿ, ಮಂಜುನಾಥ ಗುಲಗಂಜಿ, ವೇಂಕಟೇಶ ಹಾಳಕೇರಿ ಇದ್ದರು.



