HomeKarnataka NewsCM, DCM, ಗೃಹ ಸಚಿವರಿಗೆ ಆಡಳಿತ ಮಾಡಲು ಆಗದೇ ಹೋದ್ರೆ ರಾಜೀನಾಮೆ ಕೊಟ್ಟು ಹೋಗಬೇಕು: MLC...

CM, DCM, ಗೃಹ ಸಚಿವರಿಗೆ ಆಡಳಿತ ಮಾಡಲು ಆಗದೇ ಹೋದ್ರೆ ರಾಜೀನಾಮೆ ಕೊಟ್ಟು ಹೋಗಬೇಕು: MLC ಶರವಣ ಕಿಡಿ

For Dai;y Updates Join Our whatsapp Group

Spread the love

ಬೆಂಗಳೂರು: ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ಮಾಡಲು ಆಗದೇ ಹೋದ್ರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಜೆಡಿಎಸ್ MLC ಶರವಣ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಸಿಎಂ ಅವರು ಜನರು ಸತ್ತಿದ್ದಾರೆ ಅಂತ ಗೊತ್ತಿದ್ದರೂ ಸೆಲೆಬ್ರೇಷನ್ನಲ್ಲಿ ಭಾಗಿಯಾಗಿದ್ರು. ಹತ್ಯಾಕಾಂಡ ರಾಜ್ಯದಲ್ಲಿ ನಡೆದಿದೆ.

ಇದಕ್ಕೆ ಸರ್ಕಾರ ಹೊಣೆ. 25 ಲಕ್ಷ ಕೊಟ್ಟರೂ ಸತ್ತವರು ವಾಪಸ್ ಬರೊಲ್ಲ. ಇದನ್ನ ಪ್ರಶ್ನೆ ಮಾಡಿದ್ರೆ ಕುಂಭಮೇಳದ ಬಗ್ಗೆ ಮಾತಾಡ್ತಾರೆ ಕಾಂಗ್ರೆಸ್ನವರು. ನಮ್ಮ ರಾಜ್ಯದಲ್ಲಿ ಇಂತಹ ದುರಾಡಳಿತ ನಡೆಯುತ್ತಿದೆ‌. ಕರ್ನಾಟಕದ ಇತಿಹಾಸದಲ್ಲಿ ಇದು ಮರೆಯಲಾಗದ ಘಟನೆ. ಕಾಂಗ್ರೆಸ್ ಹೈಕಮಾಂಡ್ ಇದರ ಬಗ್ಗೆ ಮಾತಾಡಬೇಕು. ರಾಹುಲ್ ಗಾಂಧಿ ಬಗ್ಗೆ ಮಾತಾಡಬೇಕು.

ರಾಜ್ಯದಲ್ಲಿ ಸರ್ಕಾರದ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಸಿಎಂ ಹಿಡಿತದಲ್ಲಿ ಆಡಳಿತ ವ್ಯವಸ್ಥೆಇಲ್ಲ. ಎರಡು ಬಾರಿ ಸಿಎಂ ಆದವರಿಂದ ಆಡಳಿತ ನಿಯಂತ್ರಣ ತಪ್ಪಿದೆ. ನಿಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ ಅಂದರೆ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ಮಾಡಲು ಆಗದೇ ಹೋದ್ರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಕಿಡಿಕಾರಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!