HomeIndia Newsಮದುವೆಯ ಸಂಭ್ರಮವೇ ಕೊನೆಯ ಕ್ಷಣ! ಕೆಲವೇ ಗಂಟೆಗಳಲ್ಲಿ ವರನ ಜೀವ ಕಸಿದ ಹೆಲಿಕಾಪ್ಟರ್ ದುರಂತ

ಮದುವೆಯ ಸಂಭ್ರಮವೇ ಕೊನೆಯ ಕ್ಷಣ! ಕೆಲವೇ ಗಂಟೆಗಳಲ್ಲಿ ವರನ ಜೀವ ಕಸಿದ ಹೆಲಿಕಾಪ್ಟರ್ ದುರಂತ

For Dai;y Updates Join Our whatsapp Group

Spread the love

ಅಟ್ಲಾಂಟಾ: ಹೊಸ ಬದುಕಿನ ಕನಸುಗಳೊಂದಿಗೆ ಸಪ್ತಪದಿ ತುಳಿದಿದ್ದ ಜೋಡಿಯ ಬದುಕು ಕೆಲವೇ ಗಂಟೆಗಳಲ್ಲಿ ಭೀಕರ ದುರಂತಕ್ಕೆ ತುತ್ತಾದ ಹೃದಯವಿದ್ರಾವಕ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

ಕೇರಳ ಮೂಲದ ನವವಿವಾಹಿತ ದಂಪತಿ ಮದುವೆಯ ಸಂಭ್ರಮ ಮುಗಿಸಿಕೊಂಡು ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಿದ ಕೆಲವೇ ಕ್ಷಣಗಳಲ್ಲಿ, ದಟ್ಟ ಮಂಜು ಮತ್ತು ಕೆಟ್ಟ ಹವಾಮಾನದ ಪರಿಣಾಮವಾಗಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.

ಈ ದುರಂತದಲ್ಲಿ ಡೆಲ್ಟಾ ಏರ್‌ಲೈನ್ಸ್‌ನ ಯುವ ಪೈಲಟ್ ಡೇವ್ ಫಿಜಿ (25) ಮತ್ತು ಹೆಲಿಕಾಪ್ಟರ್ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ವೃತ್ತಿಯಲ್ಲಿ ನರ್ಸ್ ಆಗಿರುವ ನವವಧು ಜೆಸ್ನಿ ಅದ್ಭುತವಾಗಿ ಬದುಕುಳಿದಿದ್ದಾರೆ.

ಅಪಘಾತದ ಬಳಿಕ ಸುಮಾರು ಐದು ಗಂಟೆಗಳ ಕಾಲ ಅವಶೇಷಗಳ ನಡುವೆ ಸಿಲುಕಿದ್ದ ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಅತ್ಯಂತ ಕಷ್ಟಪಟ್ಟು ಹೊರತೆಗೆದಿದ್ದಾರೆ. ತೀವ್ರ ಗಾಯಗಳಾಗಿದ್ದರೂ ಜೀವಕ್ಕೆ ಅಪಾಯವಾಗದಂತೆ ಅವರು ಪಾರಾಗಿರುವುದು ವೈದ್ಯಕೀಯ ಅಚ್ಚರಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಆರಂಭಿಸಿದ್ದು, ಪ್ರಾಥಮಿಕ ವರದಿ 30 ದಿನಗಳಲ್ಲಿ ನಿರೀಕ್ಷಿಸಲಾಗಿದೆ.

ಮದುವೆಯ ಸಂತೋಷ ಕ್ಷಣಗಳಲ್ಲಿ ಆರಂಭವಾದ ಈ ಕಥೆ, ಕೆಲವೇ ಗಂಟೆಗಳಲ್ಲಿ ದುಃಖದ ದುರಂತವಾಗಿ ಬದಲಾಗಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!