ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದಲ್ಲಿರುವ ಗಂಗಾವತಿ ಭೀಮಪ್ಪನವರ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ವಾಮಿ ವಿವೇಕಾನಂದ ಸಂಘ (ರಿ) ವತಿಯಿಂದ ಕಾಲೇಜಿಗೆ ಬೆಂಚ್ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸಂಘದ ಈ ಸಮಾಜಮುಖಿ ಕಾರ್ಯವನ್ನು ಕಾಲೇಜು ಆಡಳಿತ ಮಂಡಳಿ ಶ್ಲಾಘಿಸಿ ಅಭಿನಂದನೆ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮ್ಯಾದರ ರಾಮಣ್ಣ, ಬಿಜೆಪಿ ಮುಖಂಡ ಬಲ್ಲಾಹುಣಿಸಿ ರಾಮಣ್ಣ, ಸಮಾಜಸೇವಕರಾದ ಬಸವರಾಜ್ ರೆಡ್ಡಿ, ಜಾಂಗೀರ್, ರಾಮದೇವ್, ಸಂಚಿ ಶಿವಕುಮಾರ್, ರಮೇಶ್, ನಾಗಣ್ಣ, ದೊಡ್ಡ ವೀರಪ್ಪ, ಗೋವಿಂದ, ನಂದಿ ಶಿವಕುಮಾರ್, ಪ್ರಕಾಶ್, ಶೇಖರ್, ರವಿ, ಅಸ್ಲಾಂ, ಮಂಜು, ಕೊಟ್ರೇಶ್, ಹನುಮಂತ, ನಾಗರಾಜ, ಕಾಲೇಜಿನ ಅಧೀಕ್ಷಕ ಸುರೇಶ್, ಬೆರಳಚ್ಚುಗಾರ ಸಿ.ಎಂ. ಶ್ರೀನಿವಾಸ ಹಾಗೂ ಮಡಿವಾಳರ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.



