HomeBengaluru Newsರಾಜ್ಯದಲ್ಲಿ ವಾಯು ಗುಣಮಟ್ಟ ಮತ್ತೆ ಕುಸಿತ: ಬಳ್ಳಾರಿ, ಉಡುಪಿ ಆತಂಕಕಾರಿ ಮಟ್ಟ!

ರಾಜ್ಯದಲ್ಲಿ ವಾಯು ಗುಣಮಟ್ಟ ಮತ್ತೆ ಕುಸಿತ: ಬಳ್ಳಾರಿ, ಉಡುಪಿ ಆತಂಕಕಾರಿ ಮಟ್ಟ!

For Dai;y Updates Join Our whatsapp Group

Spread the love

ಬೆಂಗಳೂರು: ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟದಲ್ಲಿ ಮತ್ತೆ ಕುಸಿತ ಕಂಡುಬಂದಿದ್ದು, ಕೆಲವು ನಗರಗಳಲ್ಲಿ ಆತಂಕಕಾರಿ ಮಟ್ಟ ತಲುಪಿದೆ ಎಂದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಸುಧಾರಣೆ ಕಂಡಿದ್ದ ವಾಯು ಗುಣಮಟ್ಟ ಇದೀಗ ಮತ್ತೆ ಹದಗೆಟ್ಟಿದೆ.

ಬಳ್ಳಾರಿಯಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) 150 ದಾಟಿ 158ಕ್ಕೆ ಏರಿಕೆಯಾಗಿದ್ದು, ಅನಾರೋಗ್ಯಕರ ಮಟ್ಟ ತಲುಪಿದೆ. ಉಡುಪಿ ಮತ್ತು ಮಂಗಳೂರು ನಗರಗಳಲ್ಲಿಯೂ AQI 100ಕ್ಕಿಂತ ಹೆಚ್ಚು ದಾಖಲಾಗಿದ್ದು, ಉಸಿರಾಟ ಸಮಸ್ಯೆಗಳಿಗೆ ಕಾರಣವಾಗುವ ಮಟ್ಟದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ AQI 129ಕ್ಕೆ ತಲುಪಿದ್ದು, ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡರೂ ಗಾಳಿಯ ಗುಣಮಟ್ಟ ಇನ್ನೂ ಕಳಪೆ ಮಟ್ಟದಲ್ಲೇ ಇದೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರಗಳಲ್ಲೂ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, ಮೈಸೂರು (121), ಬೆಳಗಾವಿ (120), ಕಲಬುರ್ಗಿ (144), ಶಿವಮೊಗ್ಗ (124), ಹುಬ್ಬಳ್ಳಿ (136) ನಗರಗಳಲ್ಲಿ AQI 100ಕ್ಕಿಂತ ಮೇಲಾಗಿದ್ದು ಕಳಪೆ ಮಟ್ಟದಲ್ಲಿದೆ. ವಿಜಯಪುರದಲ್ಲಿ ಮಾತ್ರ AQI 93 ದಾಖಲಾಗಿದ್ದು ಮಧ್ಯಮ ಮಟ್ಟದಲ್ಲಿದೆ.

ತಜ್ಞರ ಪ್ರಕಾರ, AQI 0ರಿಂದ 50ರವರೆಗೆ ಉತ್ತಮ, 50ರಿಂದ 100 ಮಧ್ಯಮ, 100ರಿಂದ 150 ಕಳಪೆ, 150ರಿಂದ 200 ಅನಾರೋಗ್ಯಕರ, 200ರಿಂದ 300 ಗಂಭೀರ ಹಾಗೂ 300ಕ್ಕಿಂತ ಮೇಲಾಗಿದ್ದರೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಉಸಿರಾಟ ಸಂಬಂಧಿ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರು ಹೊರಗೆ ಹೋಗುವಾಗ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸುವುದು, ಹೆಚ್ಚು ಸಮಯ ಹೊರಗಡೆ ಕಳೆದುವುದನ್ನು ತಪ್ಪಿಸುವುದು ಮತ್ತು ಮನೆಯೊಳಗಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!