HomeGadag Newsಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ರಾಜ್ಯದಲ್ಲಿ ಶೋಷಿತ ಸಮುದಾಯವಾಗಿರುವ ನದಾಫ್/ಪಿಂಜಾರ ಜನಾಂಗದ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಗದಗ ಜಿಲ್ಲಾ ನದಾಫ್/ಪಿಂಜಾರ್ ಸಮಾಜದ ಉಪಾಧ್ಯಕ್ಷ ರಾಜಭಕ್ಷ ಹರ್ಲಾಪೂರ, ಮುಂಡರಗಿ ತಾಲೂಕು ನದಾಫ್/ಪಿಂಜಾರ್ ಸಮಾಜದ ಅಧ್ಯಕ್ಷ ಮೌಲಾಸಾಬ ನಧಾಫ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುಂಡರಗಿ ತಾಲೂಕು ಘಟಕದ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಸಮುದಾಯವು ಮುಸ್ಲಿಂ ಒಳಪಂಗಡವಾಗಿ ಗುರುತಿಸುತ್ತಿದ್ದು, ಹಿಂದುಳಿದ ವರ್ಗಗಗಳ ಇಲಾಖೆಗೆ ಸಂಬಂಧಿಸಿದ ನದಾಫ್/ಪಿಂಜಾರ್‌ಉಪ ಜಾತಿಯನ್ನು ಪ್ರವರ್ಗ-1ರ ಅಡಿಯಲ್ಲಿ ಮೀಸಲಾತಿ ಹೊಂದಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಇತರೆ ಯೋಜನೆಗಳಿಂದ ಸೌಲಭ್ಯ ಪಡೆದುಕೊಳ್ಳಲು ಸರ್ಕಾರದ ನಿರ್ದೇಶನ ಇದ್ದರೂ ಸತತವಾಗಿ ತಾಂತ್ರಿಕ ದೋಷ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಾಲೆಸಾಬ ನದಾಫ್, ರಸೂಲ್ ಸಾಬ ಮೌಲಾಸಾಬ ಕಿನ್ನಾಳ, ಪೀರಸಾಬ ಯ.ನದಾಫ್, ರಾಜೇಸಾಬ ಡಂಬಳ, ಮಾಬುಸಾಬ ಕವಲೂರ, ಪ್ರೇಮಸಾಬ ಹರ್ಲಾಪೂರ, ಇಮಾಮಸಾಬ ಕಲ್ಲೂರ, ಕುಮಾರಸಾಬ ಹಳ್ಳಿಗುಡಿ, ರಾಜೇಸಾಬ ಇಮಾಮಸಾಬ ನದಾಫ್, ರಮಜಾನಸಾಬ ನದಾಫ್, ರೈಮನಸಾಬ ನದಾಫ್, ದಾವಲಸಾಬ ಮಾಬುಸಾಬ ಮತ್ತೂರ, ಶರೀಫಸಾಬ ಯ.ನದಾಫ್, ಕರೀಮಸಾಬ ನದಾಫ್, ಹುಸೇನಸಾಬ ನದಾಫ್, ಬಾಷೇಸಾಬ ನದಾಫ್, ಮೌಲಾಸಾಬ ವೆಂಕಟಾಪೂರ, ಅಲ್ಲಾಸಾಬ ನದಾಫ್, ಹಸನಸಾಬ ನದಾಫ್, ಅಲ್ಲಾಭಕ್ಷ ದಾವಲಸಾಬ್ ಕೊಪ್ಪಳ, ಫಕ್ರುದ್ದೀನ್ ಹರ್ಲಾಪುರ್, ಚಮನ್ ಸಾಬ್ ಜಂತ್ಲಿ, ಅಲ್ಲಾಭಕ್ಷಿ ಖಾಸಿಂಸಾಬ್ ನದಾಫ್ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img