HomeEntertainmentಬೆಂಗಳೂರು ಕಾಮಿಡಿ ಶೋ ವಿವಾದ: ಮುನಾವರ್ ಫಾರುಕಿ ಕಾರ್ಯಕ್ರಮ ರದ್ದುಪಡಿಸಲು ಆಗ್ರಹ!

ಬೆಂಗಳೂರು ಕಾಮಿಡಿ ಶೋ ವಿವಾದ: ಮುನಾವರ್ ಫಾರುಕಿ ಕಾರ್ಯಕ್ರಮ ರದ್ದುಪಡಿಸಲು ಆಗ್ರಹ!

For Dai;y Updates Join Our whatsapp Group

ಬೆಂಗಳೂರು: ನಗರದಲ್ಲಿ ನಾಳೆ ನಡೆಯಬೇಕಿರುವ ಮುನಾವರ್ ಫಾರುಕಿ ಅವರ ಸ್ಟ್ಯಾಂಡ್‌ಅಪ್ ಕಾಮಿಡಿ ಶೋ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.

ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಅಥವಾ ರದ್ದುಪಡಿಸಬೇಕು ಎಂದು ಆಗ್ರಹಿಸಿದೆ. ಹಿಂದಿನ ವಿವಾದಗಳು ಹಾಗೂ ಕಾನೂನು ಸುವ್ಯವಸ್ಥೆ ಹಿನ್ನಲೆ ಈ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ಸಮಿತಿ 2021ರ ಇಂದೋರ್ ಪ್ರಕರಣವನ್ನು ಉಲ್ಲೇಖಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ದಾಖಲಾಗಿದ್ದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿಯಿದೆ ಎಂದು ಹೇಳಿದೆ. ಈ ಹಿನ್ನೆಲೆ ಸಾರ್ವಜನಿಕ ಭದ್ರತೆ ದೃಷ್ಟಿಯಿಂದ ಶೋ ಅಪಾಯಕಾರಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದೇ ವೇಳೆ ದೇಶದ ವಿವಿಧ ನಗರಗಳಲ್ಲಿ ಅವರ ಶೋಗಳು ಹಿಂದೆ ವಿವಾದಕ್ಕೆ ಒಳಗಾಗಿ ರದ್ದಾಗಿರುವ ಉದಾಹರಣೆಗಳನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿಯೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img