HomeGadag Newsಕಾಲೇಜು ಸಂಸತ್ ಚುನಾವಣೆ

ಕಾಲೇಜು ಸಂಸತ್ ಚುನಾವಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮತದಾರರ ಸಾಕ್ಷರತಾ ಸಂಘದ ಅಡಿಯಲ್ಲಿ 2024-25ನೇ ಸಾಲಿನ ಕಾಲೇಜು ಸಂಸತ್ ಚುನಾವಣೆಯನ್ನು ನಡೆಸಲಾಯಿತು.

ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ತಮ್ಮ ಕಾಲೇಜಿನ ಪ್ರತಿನಿಧಿಗಳನ್ನು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಮತದಾನ ಮಾಡುವ ಮೂಲಕ ಆಯ್ಕೆ ಮಾಡಿದ್ದು ಗಮನ ಸೆಳೆಯಿತು.

ಭವಿಷ್ಯದ ಮತದಾರರಿಗಾಗಿ ನಿಯಮಬದ್ಧ ಪ್ರಾತ್ಯಕ್ಷಿಕೆಯ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಕಾಲೇಜು ಚುನಾವಣಾ ಆಯೋಗವನ್ನು ರಚಿಸಿಕೊಂಡು ಅಧಿಸೂಚನೆ ಹೊರಡಿಸುವ ಮೂಲಕ ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು, ಚಿಹ್ನೆಗಳ ಹಂಚಿಕೆ, ಪ್ರಚಾರದ ವೈಖರಿ ಮುಂತಾದ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನನ ಮಾಡಿಕೊಡಲಾಯಿತು.

ವೀಕ್ಷಕರಾಗಿ ತಾಲೂಕ ತಹಸೀಲ್ದಾರ ವಾಸುದೇವಸ್ವಾಮಿ ಆಗಮಿಸಿ ಎಲ್ಲ ಪ್ರಕ್ರಿಯೆಗಳನ್ನು ಕಂಡು ಎಲ್ಲಾ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸಂವಾದ ನಡೆಸಿದರು. ಈ ಎಲ್ಲ ಚುನಾವಣೆಯ ಪ್ರಕ್ರಿಯೆ ಉಪನ್ಯಾಸಕ ಮಂಜುನಾಥ್ ಕೊಕ್ಕರಗುಂದಿ ನೇತೃತ್ವದಲ್ಲಿ ನಡೆಯಿತು. ಪ್ರಾಚಾರ್ಯ ಕುಬೇರಪ್ಪ ಶಿದ್ರಾಮಣ್ಣನವರ, ಉಪನ್ಯಾಸಕರಾದ ಭಾಗ್ಯಲಕ್ಷ್ಮಿ ಜೆ, ವಿನಾಯಕ ವೇತಾಳ, ನಾಗಪ್ಪ ಸಾತಪುತೆ, ಬಸವರಾಜ್ ದೊಡ್ಡಮನಿ ಪರಮೇಶ್ವರ ಲಮಾಣಿ, ರುದ್ರೇಶ್ ಬಡಿಗೇರ, ಎಸ್.ಎಫ್. ಹೂಗಾರ, ಸದಾನಂದ ನಡುವಿನಮನಿ, ರವಿ ಹೊನ್ನತ್ತಿ ಶೋಭಾ, ಸುರೇಖಾ ಅಂಗಡಿ ಇವರೆಲ್ಲರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here

E-Paper

E-paper

Must Read

spot_img