HomePolitics Newsಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗದು: ಸಂತೋಷ ಲಾಡ್‌

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗದು: ಸಂತೋಷ ಲಾಡ್‌

For Dai;y Updates Join Our whatsapp Group

ಧಾರವಾಡ: ಜಮ್ಮು ಕಾಶ್ಮಿರ, ಹರಿಯಾಣ, ಮಹಾರಾಷ್ಟ್ರ ಚುಣಾವಣೆ ಆದ ಮೆಲೆ ಕೇಂದ್ರದಲ್ಲಿ ಮೋದಿ ಸರಕಾರ ಅಳಗಾಡುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಎಲ್ಲ ಸರ್ವೆ ರಿಪೋರ್ಟ ನಲ್ಲಿ ಬಿಜೆಪಿ ಸೋಲುತ್ತೆ ಎಂದು ಸರ್ವೆ ಹೇಳಿದೆ. ಹೀಗಾಗಿ ಅವರಿಗೆ ಭಯವಿದೆ. ಆದರೆ, ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ. ಐದು ವರ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗದು ಎಂದು ಹೇಳಿದರು.

ಇನ್ನು, ಬಿಜೆಪಿ ಹಗರಣಗಳ ತನಿಖೆಗೆ ಚುರುಕು ಮುಟ್ಟಿಸಲು ಸಮಿತಿ ರಚಿಸಿರುವ ಸಿಎಂ, ನಮಗೆ ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ ಎಂದು ಸಚಿವ ಲಾಡ್ ಹೇಳಿದರು. ಹಗರಣ ಪ್ರಕರಣಗಳ ತನಿಖೆಯ ಸಮನ್ವಯ ಸಮಿತಿ ಸದಸ್ಯನನ್ನಾಗಿ ನನ್ನನ್ನು ಸಿಎಂ ನೇಮಿಸಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್​, ಎಚ್.ಕೆ.ಪಾಟೀಲ ಅವರಿದ್ದಾರೆ. ಸಭೆ ಕರೆದಾಗ ಹೋಗುತ್ತೇವೆ, ಆಗು-ಹೋಗುಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img