HomeGadag Newsಕೆಎಲ್‌ಇ ಶಾಲೆಯಲ್ಲಿ ಶಾಲಾ ಸಂಸತ್ ರಚನೆ

ಕೆಎಲ್‌ಇ ಶಾಲೆಯಲ್ಲಿ ಶಾಲಾ ಸಂಸತ್ ರಚನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಕೆಎಲ್‌ಇ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್‌ ರಚನೆ ಮಾಡಲಾಯಿತು.

ಶಾಲಾ ಆಡಳಿತ ವ್ಯವಸ್ಥೆ ಹಾಗೂ ಸರ್ಕಾರಿ ಆಡಳಿತದ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಹಿತದೃಷ್ಟಿಯಿಂದ ಆಯೋಜಿಸಲಾದ ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚುನಾವಣೆಗಳ ಮಾದರಿಯಲ್ಲಿಯೇ ಗುಪ್ತ ಮತದಾನ ಪದ್ಧತಿ ಅನುಸರಿಸಿ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಸಮರ್ಥ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಲಾಯಿತು.

ಶಾಲಾ ಪ್ರಧಾನಿಯಾಗಿ ಧೃತಿ ಪಿ. ವಾರಕರ್ ಹಾಗೂ ಉಪ ಪ್ರಧಾನಿಯಾಗಿ ಬಸವರಾಜ ಎಂ. ಗೊಳಗೊಳಕಿ ಆಯ್ಕೆಯಾದರು. ಕ್ರೀಡಾ ಮಂತ್ರಿಯಾಗಿ ಕಾರ್ತಿಕ ಲಮಾಣಿ, ಉಪ ಮಂತ್ರಿಯಾಗಿ ಕಿರಣ್ ತುಪ್ಪದ, ಶಿಸ್ತು ವಿಭಾಗದ ಮಂತ್ರಿಯಾಗಿ ಮನೋಜ ಮೆಣಸಗಿ, ಉಪ ಮಂತ್ರಿಯಾಗಿ ತನ್ವಿ ಚೆನ್ನಳ್ಳಿ ಆಯ್ಕೆಯಾದರು.

ಸಾಂಸ್ಕೃತಿಕ ಮಂತ್ರಿಯಾಗಿ ಚಿನ್ಮಯಿ ಹಿರೇಮಠ, ಉಪ ಮಂತ್ರಿಯಾಗಿ ಅನ್ವಿ ಭೂಸ್ತ ಆಯ್ಕೆಯಾಗಿದ್ದು, ನೀಲಿ ಪಡೆಯ ನಾಯಕಿಯಾಗಿ ಪ್ರತೀಕ್ಷಾ ಪಾಟೀಲ ಹಾಗೂ ಉಪ ನಾಯಕಿಯಾಗಿ ವಿರಾಲಿ ಬನ್ಸಾಲಿ, ಹಸಿರು ಪಡೆಯ ನಾಯಕಿಯಾಗಿ ಪೂರ್ವಿ ರಾಮನಕೊಪ್ಪ ಹಾಗೂ ಉಪ ನಾಯಕಿಯಾಗಿ ಸೇಜಲ್ ಮೇರವಾಡೆ ಆಯ್ಕೆಯಾದರು.

ಕೆಂಪು ಪಡೆಯ ನಾಯಕನಾಗಿ ಸುಭಾಷ್ ಹಾದಿ, ಉಪ ನಾಯಕಿಯಾಗಿ ಹಾರ್ದಿಕಾ ಬೆಳವಡಿ, ಹಳದಿ ಪಡೆಯ ನಾಯಕಿಯಾಗಿ ದಿವಿಜಾ ಹೊಸೂರ ಹಾಗೂ ಉಪ ನಾಯಕನಾಗಿ ಅಭಿನವ್ ಕುಂಬಾರ ಆಯ್ಕೆಯಾಗಿದ್ದಾರೆ.

ಕಿರಿಯರ ವಿಭಾಗದಲ್ಲಿ ಬಾಲಕರ ಪ್ರಧಾನಿಯಾಗಿ ಸಿದ್ದಾರ್ಥ್ ಕಬಾಡರ ಹಾಗೂ ಬಾಲಕಿಯರ ಪ್ರಧಾನಿಯಾಗಿ ಪ್ರಾರ್ಥನಾ ಕೊಪ್ಪದ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಶಾಲಾ ಸಂಸತ್ತಿನ ಎಲ್ಲಾ ಸದಸ್ಯರನ್ನು ಸಂಸ್ಥೆಯ ಕಾರ್ಯಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಶಾಲೆಯ ಪ್ರಾಂಶುಪಾಲರು, ಸಂಯೋಜಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಶುಭ ಹಾರೈಸಿದರು.

“ಶಾಲಾ ಸಂಸತ್‌ ಚುನಾವಣೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಇಂತಹ ಪ್ರಕ್ರಿಯೆಗಳು ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುತ್ತವೆ.”

– ಶಾಲಾ ಆಡಳಿತ ಮಂಡಳಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!