HomeSports NewsIPL 2026: ಕೊಹ್ಲಿ-ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್: ಗುಜರಾತ್ ವಿರುದ್ದ ಬೆಂಗಳೂರಿಗೆ ಭರ್ಜರಿ ಜಯ!

IPL 2026: ಕೊಹ್ಲಿ-ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್: ಗುಜರಾತ್ ವಿರುದ್ದ ಬೆಂಗಳೂರಿಗೆ ಭರ್ಜರಿ ಜಯ!

For Dai;y Updates Join Our whatsapp Group

Spread the love

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ವಿರಾಟ್ ಕೊಹ್ಲಿ ಮತ್ತು ದೇವದತ್ತ್ ಪಡಿಕ್ಕಲ್ ಅವರ ಆಕರ್ಷಕ ಬ್ಯಾಟಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸಾಯಿ ಸುದರ್ಶನ್ 58 ಬಾಲ್‌ಗಳಲ್ಲಿ 11 ಫೋರ್ ಹಾಗೂ 5 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮಿಂಚಿದರು. ನಾಯಕ ಶುಭಮನ್ ಗಿಲ್ 32, ಜೋಶ್ ಬಟ್ಲರ್ 25, ವಾಷಿಂಗ್ಟನ್ ಸುಂದರ್ 19 ಹಾಗೂ ಜೇಸನ್ ಹೋಲ್ಡರ್ 23 ರನ್‌ಗಳೊಂದಿಗೆ ತಂಡಕ್ಕೆ ಬಲ ತುಂಬಿದರು.

206 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಜಾಕೋಬ್ ಬೆಥೆಲ್ (14) ವಿಕೆಟ್ ಕಳೆದುಕೊಂಡಿತು. ನಂತರ ಕೊಹ್ಲಿ ಮತ್ತು ಪಡಿಕ್ಕಲ್ ಶತಕದ ಜೊತೆಯಾಟ ಕಟ್ಟುವ ಮೂಲಕ ಪಂದ್ಯವನ್ನು ತಂಡದ ಕಡೆಗೆ ತಿರುಗಿಸಿದರು. ಕೊಹ್ಲಿ 44 ಬಾಲ್‌ಗಳಲ್ಲಿ 81 ರನ್ (8 ಫೋರ್, 4 ಸಿಕ್ಸರ್) ಗಳಿಸಿದರೆ, ಪಡಿಕ್ಕಲ್ 27 ಬಾಲ್‌ಗಳಲ್ಲಿ 55 ರನ್ ಸಿಡಿಸಿ ಗಮನ ಸೆಳೆದರು.

ಕೊನೆಯಲ್ಲಿ ಕೃಣಾಲ್ ಪಾಂಡ್ಯ ಅಜೇಯ 23 ರನ್‌ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿಮ್ ಡೇವಿಡ್ ಹಾಗೂ ಜಿತೇಶ್ ಶರ್ಮಾ ತಲಾ 10 ರನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ 19ನೇ ಓವರ್‌ನಲ್ಲೇ ಗುರಿ ತಲುಪಿ ಗೆಲುವು ಸಾಧಿಸಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!