HomePolitics Newsಓರ್ವ ಶಾಸಕರನ್ನು ಎನ್‌ʼಕೌಂಟರ್ ಮಾಡಲು ಸಾಧ್ಯವೇ?: ಸತೀಶ್ ಜಾರಕಿಹೊಳಿ ಪ್ರಶ್ನೆ

ಓರ್ವ ಶಾಸಕರನ್ನು ಎನ್‌ʼಕೌಂಟರ್ ಮಾಡಲು ಸಾಧ್ಯವೇ?: ಸತೀಶ್ ಜಾರಕಿಹೊಳಿ ಪ್ರಶ್ನೆ

For Dai;y Updates Join Our whatsapp Group

ಬೆಳಗಾವಿ: ಸಿ.ಟಿ ರವಿ ಓರ್ವ ಶಾಸಕ, ಅವರನ್ನು ಹೇಗೆ ಎನ್‌ಕೌಂಟರ್ ಮಾಡಲು ಸಾಧ್ಯ ಎಂದು  ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ’ನನ್ನನ್ನು ಪೊಲೀಸರು ಎನ್‌ಕೌಂಟರ್ ಮಾಡೋ ಸಂಚು ರೂಪಿಸಿದ್ರು’ ಎಂಬ ಸಿ.ಟಿ ರವಿ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಸಿಟಿ ರವಿ ಓರ್ವ ವಿಧಾನ ಪರಿಷತ್ ಸದಸ್ಯ, ಅವರನ್ನು ಹೇಗೆ ಎನ್‌ಕೌಂಟರ್ ಮಾಡಲು ಸಾಧ್ಯ? ಸಿಟಿ ರವಿಗೆ ತೊಂದರೆ ಕೊಡಬೇಕು ಎಂದು ನಾವು ಠಾಣೆಯಿಂದ ಠಾಣೆಗೆ ಸುತ್ತಾಡಿಸಿಲ್ಲ.

ಹೋದ ಎಲ್ಲ ಕಡೆಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಲು ಶುರು ಮಾಡಿದ್ರು. ಹೀಗಾಗಿ ಠಾಣೆಯಿಂದ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ದೇಶದಲ್ಲಿ ಇಂಥ ಘಟನೆಗಳು ಹೊಸದೇನಲ್ಲ, ಸಂಸತ್ತು, ವಿಧಾನಸಭೆಯಲ್ಲಿ ಬಹಳಷ್ಟು ನಡೆದಿವೆ. ಘಟನೆಗೆ ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಈಗಲೂ ಅದೇ ರೀತಿ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ‌ಎಂದರು.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img