HomeGadag Newsಮೃತ್ಯುಂಜಯ ಅಪ್ಪನವರ ಸ್ಮರಣೋತ್ಸವ ಮಾಲಿಕೆ

ಮೃತ್ಯುಂಜಯ ಅಪ್ಪನವರ ಸ್ಮರಣೋತ್ಸವ ಮಾಲಿಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಮಣಕವಾಡದ ಮಹಿಮಾ ಪುರುಷ ಶ್ರೀಗುರು ಮೃತ್ಯುಂಜಯ ಮಹಾಸ್ವಾಮಿಗಳ ಸ್ಮರಣೋತ್ಸವ ಮಾಲಿಕೆ-129 ಸಮಾರಂಭ ಜೂನ್ 30ರಂದು ಮುಂಜಾನೆ 10.30ಕ್ಕೆ ನಗರದ ಲಖಾನೆ ಆಸ್ಪತ್ರೆಯ ಎದುರಿಗಿನ ಮೃತ್ಯುಂಜಯ ಗುರುಕುಲ ಆಶ್ರಮದ ಸಭಾ ಭವನದಲ್ಲಿ ಜರುಗಲಿದೆ. ಹಿರಿಯ ಸಾಹಿತಿಗಳು ಹಾಗೂ ಸೌಹಾರ್ದ ಮಹಾಮನೆ ವೇದಿಕೆಯ ಅಧ್ಯಕ್ಷರಾದ ಐ.ಕೆ. ಕಮ್ಮಾರ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರೇಮಾ ಬಸವರಾಜ ಪೂಜಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಂದಿನ ಭಕ್ತಿ ಸೇವೆಯನ್ನು ಆಶ್ರಮದ ವತಿಯಿಂದ ಏರ್ಪಡಿಸಲಾಗಿದೆ. ಭಕ್ತರಾದ ನಾಗಾವಿಯ ಮೃತ್ಯುಂಜಯ ಹಟ್ಟಿ, ಕೆ.ಬಿ. ಮರಡ್ಡಿ ಗುರುಗಳು, ರಾಯಪ್ಪಜ್ಜ ನಾಗನೂರ, ಶಿವಣ್ಣ ಒಡೆಯರ, ಎಚ್.ಎನ್. ಕುರಿ, ಡಿ.ಜಿ. ಪಾಟೀಲ, ರಾಜೇಂದ್ರ ಕಲಬುರ್ಗಿ, ಶಿವಶಂಕರಪ್ಪ ಆರಟ್ಟಿ ಉಪಸ್ಥಿತರಿರುವರು.

ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪೂಜ್ಯ ಮೃತ್ಯುಂಜಯ ಅಪ್ಪನ ಕೃಪೆಗೆ ಪಾತ್ರರಾಗಲು ಆಶ್ರಮದ ವಿದ್ಯಾರ್ಥಿಗಳಾದ ಆಲಮ್, ಅಸ್ಲಂ, ಅಕ್ರಂ, ಸ್ನೇಹಾ, ವಿಕಾಸ, ತರುಣ ಮುಂತಾದವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img