HomeGadag Newsನೂರಾನಿ ಮುಸ್ಲಿಂ ಜಮಾತಿನ ಸಭೆ

ನೂರಾನಿ ಮುಸ್ಲಿಂ ಜಮಾತಿನ ಸಭೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯ 20ನೇ ವಾರ್ಡಿನಲ್ಲಿ ನೂರಾನಿ ಮುಸ್ಲಿಂ ಜಮಾತಿನ ಅಧ್ಯಕ್ಷ ಉಮರಸಾಬ ಕೌತಾಳ ಹಾಗೂ ಉಪಾಧ್ಯಕ್ಷ ಯೂಸುಫ್‌ಸಾಬ್ ಕೊಟ್ಟೂರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ಹೊನ್ನೂರಸಾಬ ಕೊಟ್ಟೂರ, ಇಮ್ತಿಯಾಜ್ ಶೇಖ್ ನೂರಾನಿ ಮುಸ್ಲಿಂ ಜಮಾತಿಗೆ ಸದಸ್ಯರಾಗಿ ಆಯ್ಕೆ ಆದರು.

ನೂತನ ಸದಸ್ಯರನ್ನು ಹುಲಕೋಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಸೀಂಸಾಬ ತಹಸೀಲ್ದಾರ ಸನ್ಮಾನಿಸಿ, ಗೌರವಿಸಿ, ಶುಭ ಕೋರಿದರು. ಯುವ ಮುಖಂಡರಾದ ಕರೀಮಸಾಬ ಸುಣಗಾರ ಮಾತನಾಡಿ, ನೂರಾನಿ ಮುಸ್ಲಿಂ ಜಮಾತ ಸರ್ವತೋಮುಖವಾಗಿ, ಪ್ರಬಲವಾಗಿ ಬೆಳೆಸುವ ಉದ್ದೇಶದಿಂದ ಹೊನ್ನೂರಸಾಬ ಕೊಟ್ಟೂರ ಹಾಗೂ ಇಮ್ತಿಯಾಜ್ ಶೇಖ್ ಅವರನ್ನ ಸದಸ್ಯರಾಗಿ ಆಯ್ಕೆ ಮಾಡಿರುವುದಕ್ಕೆ ಅಧ್ಯಕ್ಷ ಉಮರಸಾಬ ಕೌತಾಳ ಹಾಗೂ ಉಪಾಧ್ಯಕ್ಷ ಕೊಟ್ಟೂರರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೆಹಬೂಬಸಾಬ ಹುನಗುಂದ, ಕೋಶಾಧ್ಯಕ್ಷ ಮೆಹಬೂಬಸಾಬ ಮಿರ್ಜಿ, ಸಹ ಕಾರ್ಯದರ್ಶಿ ದಾವೂದ ಶಿರಹಟ್ಟಿ, ಭಾಷಾಸಾಬ ಪಿಜಕಲ್, ಸುರೇಂದ್ರ ಕಾಟೇವಾಲ ಸೇರಿದಂತೆ ಸಮಾಜ ಬಾಂಧವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img