HomeKarnataka NewsBSY ಅವಧಿಯ ಕಾಮಗಾರಿ ಬಿಲ್ʼಗಳು ಬಾಕಿ, ಒಂದೊಂದಾಗಿ ಕ್ಲಿಯರ್ ಮಾಡ್ತಿದ್ದೇವೆ: ಸಿಎಂ ಡಿ.ಕೆ. ಶಿವಕುಮಾರ್

BSY ಅವಧಿಯ ಕಾಮಗಾರಿ ಬಿಲ್ʼಗಳು ಬಾಕಿ, ಒಂದೊಂದಾಗಿ ಕ್ಲಿಯರ್ ಮಾಡ್ತಿದ್ದೇವೆ: ಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

ಚಾಮರಾಜನಗರ:”ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ. ನನ್ನ ಕ್ಷೇತ್ರದ ಪಕ್ಕದಲ್ಲೇ ಇರುವ ಈ ಭಾಗದ ಜನ ನಿಜಕ್ಕೂ ಶ್ರಮಜೀವಿಗಳು” ಎಂದು CM ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹನೂರು ಬಳಿಯ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯೊಂದಿಗಿನ ತಮ್ಮ ಹಳೆಯ ಒಡನಾಟ ಹಾಗೂ ಪ್ರಚಲಿತ ರಾಜಕೀಯ ವಿಷಯಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

“ಪ್ರತಿ ವರ್ಷ ನನ್ನ ಕ್ಷೇತ್ರದಿಂದ ಸಾವಿರಾರು ಜನರು ಮಹದೇಶ್ವರ ಬೆಟ್ಟಕ್ಕೆ ಬರುತ್ತಾರೆ. ಚಿಕ್ಕಂದಿನಲ್ಲಿ ನನ್ನ ತಂದೆಯವರ ಜೊತೆ ಇಲ್ಲಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯಕ್ಕೆ ಬಂದಿದ್ದೆ. ಪ್ರಸ್ತುತ ಇಡೀ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಇಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ಮಳೆಯಾಗುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ಡಿಕೆಶಿ ಹೇಳಿದರು.

ಗುತ್ತಿಗೆದಾರರ ಸಂಘ ಮಾಡುತ್ತಿರುವ ಕಮಿಷನ್ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಯಾರಿಗೆ ಕಮಿಷನ್ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಪ್ರಕರಣ ದಾಖಲಿಸಲಿ” ಎಂದು ಬಹಿರಂಗ ಸವಾಲು ಹಾಕಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯ ಬಗ್ಗೆ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, “ಯಡಿಯೂರಪ್ಪ ಅವರು ತಮ್ಮ ಕಾಲದಲ್ಲಿ ಬೇಕಾದಷ್ಟು ಗುತ್ತಿಗೆ ಕೆಲಸಗಳನ್ನು ನೀಡಿದ್ದರು. ಆ ಕೆಲಸಗಳು ಈಗ ಮುಗಿಯುತ್ತಿದ್ದು, ಅದಕ್ಕೆ ಸಂಬಂಧಿಸಿದ ಬಿಲ್‌ಗಳು ಇನ್ನೂ ಬಾಕಿ ಉಳಿದುಕೊಂಡಿವೆ. ಇಂತಹ ಕೆಲಸಗಳಿಂದ ಅನಾಹುತಗಳಾಗುತ್ತಿವೆ. ಗುತ್ತಿಗೆದಾರರು ಉಳಿಯಬೇಕು, ಅಭಿವೃದ್ಧಿ ಕೆಲಸಗಳೂ ಆಗಬೇಕು. ಬಾಕಿ ಬಿಲ್‌ಗಳನ್ನು ಒಂದೊಂದಾಗಿ ಕ್ಲಿಯರ್ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img