HomeEntertainmentಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್: ಕಾರಣ ತಿಳಿಸಿದ ನಟಿ

ಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್: ಕಾರಣ ತಿಳಿಸಿದ ನಟಿ

For Dai;y Updates Join Our whatsapp Group

ಬಹುಭಾಷ ನಟಿ ಪ್ರಣಿತಾ ಸುಭಾಷ್ ಹಾಗೂ ಉದ್ಯಮಿ ನಿತಿನ್ ರಾಜು ದಂಪತಿಗೆ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಗಂಡು ಮಗು ಜನಿಸಿದೆ. ಇದೀಗ ಅದ್ದೂರಿಯಾಗಿ ಮಗನಿಗೆ ನಾಮಕರಣ ಶಾಸ್ತ್ರ ಮಾಡಿದ್ದು ಚಿತ್ರತಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಂದ ಹಾಗೆ ಮಕ್ಕಳಿಗೆ ಹಲವರು ಫ್ಯಾನ್ಸಿ ಹೆಸರಿನ ಹಿಂದೆ ಓಡುತ್ತಿದ್ದರೆ ಪ್ರಣಿತಾ ಮಾತ್ರ ಮಹಾಭಾರತದಲ್ಲಿ ಬರೋ ಈ ಪ್ರಮುಖ ವ್ಯಕ್ತಿಯ ಹೆಸರು ಇಟ್ಟಿದ್ದಾರೆ. ಹೌದು, ತಮ್ಮ ಮಗುವಿಗೆ  ಜೈ ಕೃಷ್ಣ ಎಂದು ನಟಿ ನಾಮಕರಣ ಮಾಡಿದ್ದಾರೆ.

ಅಂದ ಹಾಗೆ ಪ್ರಣೀತಾ ತಂದೆಯ ಹೆಸರು ಬಾಲಕೃಷ್ಣ. ಜೊತೆಗೆ ಪ್ರಣಿತಾ ಮಗ ಜನಿಸಿದ ಹಾಸ್ಪಿಟಲ್ ಹೆಸರು ಶ್ರೀಕೃಷ್ಣ. ಪ್ರಣಿತಾ ಪತಿ ನಿತಿನ್‌ ರಾಜು ತಂದೆಯ ಹೆಸರು ವಾಸುದೇವ. ಹಾಗಾಗಿ ಎಲ್ಲಾ ಹೆಸರನ್ನು ಒಟ್ಟಿಗೆ ಸೇರಿ ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದಾರೆ ಪ್ರಣಿತಾ ಹಾಗೂ ನಿತಿನ್‌ ರಾಜು.

ಕೊವಿಡ್‌ ಸಂದರ್ಭದಲ್ಲಿ ಪ್ರಣಿತಾ ಹಾಗೂ ಉದ್ಯಮಿ ನಿತಿನ್ ರಾಜು ಮದುವೆಯಾಗಿದ್ದರು. ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತು. ಅವಳಿಗೆ ಅರ್ನಾ ಎಂದು ಹೆಸರು ಇಟ್ಟಿದಾರೆ. ಸೆಪ್ಟೆಂಬರ್​​ನಲ್ಲಿ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದು ಇದೀಗ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಿದ್ದಾರೆ.

ಮದುವೆ ಮಗುವಾದ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿರುವ ನಟಿ ಸದ್ಯ ಎರಡನೇ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದಲ್ಲೇ ನಟಿ ಮತ್ತೆ ಕಂಬ್ಯಾಕ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img