HomeGadag Newsನಿವೃತ್ತ ನೌಕರರಿಂದ ಸಿಎಂಗೆ ಮನವಿ

ನಿವೃತ್ತ ನೌಕರರಿಂದ ಸಿಎಂಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸರ್ಕಾರ 7ನೇ ವೇತನ ಆಯೋಗದ ಆದೇಶವನ್ನು ಪುನರ್ ಪರಿಶೀಲಿಸಿ, ಹೊಸ ಆದೇಶ ಹೊರಡಿಸಿ ನಿವೃತ್ತ ನೌಕರರ ಆರ್ಥಿಕ ಸೌಲಭ್ಯವನ್ನು ಕೂಡಲೇ ನೀಡಬೇಕು ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ನೀಡಿದರು.

01-07-2022ರಿಂದ 31-07-2024ರವರೆಗೆ ನಿವೃತ್ತರಾದ/ನಿಧನ ಹೊಂದಿದ ಅಧಿಕಾರಿ, ನೌಕರರಿಗೆ ಪರಿಷ್ಕೃತ ವೇತನದನ್ವಯ DCRG, COMMUTATION (OPTION) (5) EL ENCASHMENT ಲೆಕ್ಕಾಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸಲಾಗುತ್ತಿದೆ. ಪರಿಣಾಮ ನಿವೃತ್ತಿ ಜೀವನ ಸಂಧ್ಯಾ ಕಾಲದಲ್ಲಿರುವ ನಮಗೆ ಅತೀವ ಆಘಾತವಾಗಿದೆ. ಪ್ರಸ್ತುತ ಸೇವೆಯಲ್ಲಿರುವ ಇತರ ಅಧಿಕಾರಿ/ನೌಕರರಂತೆ ನಾವು ಕೂಡ ದಿನಾಂಕ 01-07-2022ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸ ಬಾಕಿಯನ್ನು ಕೇಳುತ್ತಿಲ್ಲ. ಹೀಗಾಗಿ ನಮಗೆ ಆಗುತ್ತಿರುವ ಅರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ಮೇಲಿನ ಅವಧಿಯಲ್ಲಿ ನಿವೃತ್ತರಾದ ನಮಗೂ ಪರಿಷ್ಕೃತ ಮೂಲ ವೇತನದ ಮೇಲೆ DCRG, COMMUTATION (OPTION) EL ENCASHMENT ಲೆಕ್ಕಾಚಾರ ಮಾಡಿ ನ್ಯಾಯೋಚಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ನೀಡಬೇಕು ಎಂದು ಮನವಿ ನೀಡಿದರು.

ಈ ವೇಳೆ ವೀರಣ್ಣ ಅಡಗತಿ, ಎಸ್.ಎಸ್. ಕೊಪ್ಪರದ, ಕೆ.ಆಯ್. ಕರಣಿ, ಕೆ.ಜಿ. ಸಂಗಟಿ, ವಿ.ಎಸ್. ಕೋರಿ, ಎಂ.ಎಸ್. ತೋಟದ, ಎಚ್.ವಿ. ಮಲಜಿ, ಎಸ್.ಸಿ. ಬಾಗೂರ, ವಿ.ವಾಯ್. ಸುಣಗಾರ, ಎಸ್.ಆರ್. ಅಮರಗಟ್ಟಿ, ಎಸ್.ಬಿ. ಡೊಳ್ಳಿನ, ಐ.ಎಸ್. ಹಾಶಿಮನವರ, ಬಿ.ಬಿ. ಗುರಿಕಾರ, ಡಿ.ವಿ. ಕೆಂಬಾವಿ ಸೇರಿ ಇತರರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img