HomeKarnataka Newsದತ್ತೂರಿ ಹಣ್ಣು-ಬೀಜ ಮಾರಾಟ: ಅಮೆಜಾನ್, ಬಿಗ್ʼಬಾಸ್ಕೆಟ್, ಸ್ವಿಗ್ಗಿ ಪರವಾನಗಿ ಅಮಾನತಿಗೆ ಶಿಫಾರಸು

ದತ್ತೂರಿ ಹಣ್ಣು-ಬೀಜ ಮಾರಾಟ: ಅಮೆಜಾನ್, ಬಿಗ್ʼಬಾಸ್ಕೆಟ್, ಸ್ವಿಗ್ಗಿ ಪರವಾನಗಿ ಅಮಾನತಿಗೆ ಶಿಫಾರಸು

For Dai;y Updates Join Our whatsapp Group

ಬೆಂಗಳೂರು: ವಿಷಕಾರಿ ದತ್ತೂರಿ (ಧಾತುರಾ) ಹಣ್ಣುಗಳು ಮತ್ತು ಬೀಜಗಳನ್ನು ಮಾನವ ಬಳಕೆಗಾಗಿ ತಮ್ಮ ವೇದಿಕೆಗಳಲ್ಲಿ ಪಟ್ಟಿ ಮಾಡಿ ಮಾರಾಟ ಮಾಡಿದ್ದಕ್ಕಾಗಿ ಅಮೆಜಾನ್, ಬಿಗ್‌ಬಾಸ್ಕೆಟ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಲು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಶಿಫಾರಸು ಮಾಡಿದೆ.

ಆನ್‌ಲೈನ್ ವೇದಿಕೆಗಳಲ್ಲಿ ತೀವ್ರ ವಿಷಯುಕ್ತ ದತ್ತೂರಿ ಹಣ್ಣು ಹಾಗೂ ಬೀಜಗಳ ಮಾರಾಟ ಪತ್ತೆಯಾಗಿದ್ದು, ಪ್ರಾಣಾಪಾಯ ಉಂಟುಮಾಡಬಲ್ಲ ಈ ಉತ್ಪನ್ನಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿರುವುದನ್ನು ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಅಮೆಜಾನ್ ಸೇರಿದಂತೆ ಹಲವು ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಲ್ಲಿ ದತ್ತೂರಿ ಹಣ್ಣು-ಬೀಜಗಳ ಮಾರಾಟ ನಡೆಯುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. FSSAI ಮತ್ತು FDA ನಿಯಮಗಳ ಅನುಮತಿಯಿಲ್ಲದೆ ಅಪಾಯಕಾರಿ ದತ್ತೂರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಆಯುಕ್ತರು ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಬೆನ್ನಲ್ಲೇ ಅಮೆಜಾನ್ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳ ಮುಂದೆ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img