ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯುತ್ತಿರುವ ಗದಗ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು.
ಹಲಸಿನ ಹಣ್ಣು ಹಾಗೂ ಬಾಳೆಹಣ್ಣಿನ ಸಿಹಿ ಪದಾರ್ಥ ಮತ್ತು ಜೋಳ ಹಾಗೂ ಜೋಳದ ಹಿಟ್ಟಿನ ಖಾರದ ಪದಾರ್ಥ ತಯಾರಿಕೆಯ ಎರಡು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಸಿಹಿ ಪದಾರ್ಥ ವಿಭಾಗದಲ್ಲಿ ಶೈಲಜಾ ಹೆಗಡೆ ಪ್ರಥಮ, ರಾಜೇಶ್ವರಿ ಅಂಗಡಿ ದ್ವಿತೀಯ ಹಾಗೂ ಗೀತಾ ಹೆಗಡೆ ತೃತೀಯ ಸ್ಥಾನ ಪಡೆದರು. ಸಂಜನಾ ಮಲ್ಲಾಡದ ಅವರಿಗೆ ವಿಶೇಷ ಬಹುಮಾನ ದೊರೆಯಿತು.
ಖಾರದ ಪದಾರ್ಥ ವಿಭಾಗದಲ್ಲಿ ದೀಪಾ ಉಗಲಾಟ ಪ್ರಥಮ, ನಯನಾ ಮಲ್ಲಾಡದ ದ್ವಿತೀಯ ಹಾಗೂ ಕಲಾವತಿ ಹಿರೇಮಠ ತೃತೀಯ ಸ್ಥಾನ ಪಡೆದರು. ಶಿಲ್ಪಾ ರಾಯ್ಕರ್ ವಿಶೇಷ ಬಹುಮಾನ ಪಡೆದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಮೃತಿ ಬಿ.ಎಸ್. ಹಾಗೂ ಡಾ. ರಾಧಿಕಾ ಕುಲಕರ್ಣಿ ನಿರ್ಣಾಯಕರಾಗಿದ್ದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಾನಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.



