ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೆ ಮಹೋತ್ಸವದ ಅಂಗವಾಗಿ ಆ.21ರಂದು ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ನರೇಗಲ್ನ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸುವರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸುವರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿರುವರು.
ಲೆಕ್ಕಪರಿಶೋಧಕ ಶಂಕ್ರಪ್ಪ ಕನೋಜ, ಜೆ.ಜೆ. ಕಾಲೇಜಿನ ಐ.ಎಸ್. ಪೂಜಾರ, ಉಸಿರು ಫೌಂಡೇಶನ್ ಸಂಸ್ಥಾಪಕ ಶರಣು ಪಾಟೀಲ, ವ್ಯಾಪಾರಸ್ಥರಾದ ಸದಾಶಿವಯ್ಯ ಮದರಿಮಠ, ವಿಶ್ವನಾಥಯ್ಯ ಶಿವಪ್ಪಯ್ಯನಮಠ, ಯುವ ಧುರೀಣ ವಸಂತ ಪಡಗದ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಗರಸಭಾ ಸದಸ್ಯರಾದ ಕೃಷ್ಣ ಪರಾಪೂರ, ಆಸ್ಮಾ ರೇಷ್ಮಿ, ಜೈನುಲಾಲುದ್ದೀನ್ ನಮಾಜಿ, ಮಹಾಂತೇಶ ನಲವಡಿ, ಪರವೀನಬಾನು ಮುಲ್ಲಾ, ವ್ಯಾಪಾರಸ್ಥ ಎಚ್.ಕೆ. ಮುಲ್ಲಾ, ಗುತ್ತಿಗೆದಾರ ಎಫ್.ವಿ. ಮರಿಗೌಡರ ಸೇರಿದಂತೆ ಹಲವರು ಭಾಗವಹಿಸುವರು.
ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8.30ಕ್ಕೆ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಕೊತಬಾಳದ ಅರುಣೋದಯ ಕಲಾತಂಡದಿಂದ ಜೋಗುತಿ ನೃತ್ಯ ಹಾಗೂ ದೀಪ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಜಾತ್ರೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.



