HomeKarnataka Newsಶಿರೂರು ಗುಡ್ಡ ಕುಸಿತ ದುರಂತ: ಅರ್ಜುನ್ ಮನೆಯವರಿಗೆ ವಿಶ್ವಾಸ ಮೂಡಿಸಿದ ಈಶ್ವರ್ ಮಲ್ಪೆ..!

ಶಿರೂರು ಗುಡ್ಡ ಕುಸಿತ ದುರಂತ: ಅರ್ಜುನ್ ಮನೆಯವರಿಗೆ ವಿಶ್ವಾಸ ಮೂಡಿಸಿದ ಈಶ್ವರ್ ಮಲ್ಪೆ..!

For Dai;y Updates Join Our whatsapp Group

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ನಾಪತ್ತೆಯಾಗಿದ್ದು, ಈವರೆಗೆ ಒಟ್ಟು 8 ಜನರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಹಲವರ ಮೃತದೇಹಗಳು ಪತ್ತೆಯಾಗಿಲ್ಲ. ಕಳೆದ 15 ದಿನಗಳಿಂದಲೂ ವಿವಿಧ ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸಿದರೂ ಸಹ ಕೇರಳದ ಅರ್ಜುನ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಗನ್ನಾಥ್, ಹಾಗೂ ಲೊಕೇಶ್ ಸುಳಿವು ಸಿಕ್ಕಿಲ್ಲ.

ಇನ್ನೂ ಮುಳುಗು ತಜ್ಞ ಈಶ್ವರ್ ಮಲ್ಪೆ ಶಿರೂರು ಗುಡ್ಡ ಕುಸಿತ ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು. ಅಮವಾಸ್ಯೆ ಸಂದರ್ಭದಲ್ಲಿ ನೀರಿನ ಸೆಳೆತ ಕಡಿಮೆ ಇರುತ್ತದೆ. ಮಳೆಯಾಗದೇ ಇದ್ದರೆ ಅಂದು ಕಾರ್ಯಾಚರಣೆ ಮಾಡುತ್ತೇನೆ. ಕೇರಳದಿಂದ ಬೋಟ್ ಒಂದು ಬರುತ್ತದೆ. ಬೋಟ್ ಬಂದು ಮಣ್ಣು ತೆರವು ಮಾಡಿದರೆ ಕಾರ್ಯಾಚರಣೆ ಮಾಡಬಹುದು ಎಂದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img