HomeEducationರೋಟರಿ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸನ್ಮಾನ

ರೋಟರಿ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಸಂಸ್ಥೆ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಸಂಸ್ಥೆಯ ಸದಸ್ಯರ ಮಕ್ಕಳಾದ ವೈಷ್ಣವಿ ಯಳಮಲಿ, ದಶಾನಂದ ಸುಲ್ತಾನಪೂರ, ಅಕ್ಷತಾ ಗುಡಿಮನಿ ಹಾಗೂ ಯಶಸ್ವಿ ಆನದಂಗಲ್ಲ ಇವರನ್ನು ಸನ್ಮಾನಿಸಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಚಂದ್ರಮೌಳಿ ಜಾಲಿ ಸರ್ವರನ್ನು ಸ್ವಾಗತಿದರು. ಅಸಿಸ್ಟಂಟ್ ಗವರ್ನರ್‌ರೊ. ಶರಣಬಸಪ್ಪ ಗುಡಿಮನಿ, ಆತಿಥ್ಯ ವಹಿಸಿದ್ದ ರೊ. ಮಹೇಶ ಕುಂದ್ರಾಳಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ವೀಣಾ ತಿರ್ಲಾಪೂರ ವೇದಿಕೆಯಮೇಲೆ ಉಪಸ್ಥಿತರಿದ್ದರು. ಸದಸ್ಯರಾದ ರೊ. ಡಾ.ಶೇಖರ ಡಿ.ಸಜ್ಜನರ, ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ಇಂ. ಮಹಾಂತೇಶ ಬಾತಾಖಾನಿ, ರೊ. ಹೆಚ್.ಎಸ್. ಪಾಟೀಲ, ರೊ. ವಿಶ್ವನಾಥ ಯಳಮಲಿ, ರೊ. ಸುರೇಶ ಕುಂಬಾರ, ರೊ. ಅನಿಲ ಹಂದ್ರಾಳ, ರೊ. ಡಾ. ಎಸ್.ಕೆ. ನಾಲತ್ತವಾಡಮಠ, ರೊ. ಡಾ. ಪ್ರದೀಪ ಉಗಲಾಟ, ರೊ. ಕೊಟ್ರೇಶ ಹಿರೇಗೌಡರ, ರೊ.ಡಾ. ಕಮಲಾಕ್ಷಿ ಅಂಗಡಿ, ರೊ. ನರೇಶ ಜೈನ, ರೊ. ಸಂತೋಷ ಅಕ್ಕಿ, ರೊ. ಡಾ. ಆರ್.ಬಿ. ಉಪ್ಪಿನ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img