HomeWorld Newsಇರಾನ್ ಜೊತೆ ವ್ಯಾಪಾರ ಬಂದ್ ಮಾಡಿ; ಇಲ್ಲದಿದ್ದರೆ ಆರ್ಥಿಕ ಪರಿಣಾಮ ಎದುರಿಸಿ: ಟ್ರಂಪ್ ಎಚ್ಚರಿಕೆ

ಇರಾನ್ ಜೊತೆ ವ್ಯಾಪಾರ ಬಂದ್ ಮಾಡಿ; ಇಲ್ಲದಿದ್ದರೆ ಆರ್ಥಿಕ ಪರಿಣಾಮ ಎದುರಿಸಿ: ಟ್ರಂಪ್ ಎಚ್ಚರಿಕೆ

For Dai;y Updates Join Our whatsapp Group

ವಾಷಿಂಗ್ಟನ್: ಇರಾನ್‌ಗೆ ಸಹಾಯ ಮಾಡುವ ಅಥವಾ ಆ ದೇಶದೊಂದಿಗೆ ವ್ಯವಹಾರ ನಡೆಸುವ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮುಂದುವರಿದಿರುವ ನಡುವೆಯೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ನೆರವು ನೀಡುವ ಅಥವಾ ಅದರೊಂದಿಗೆ ವ್ಯಾಪಾರ ನಡೆಸುವ ಯಾವುದೇ ದೇಶವು ಭಾರೀ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಕಡೆಯಿಂದ ದೊಡ್ಡ ಅವಕಾಶ ನೀಡಲಾಗಿತ್ತು. ಆದರೆ ಇರಾನ್ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಹೀಗಾಗಿ ಇರಾನ್ ವಿರುದ್ಧ ಇದುವರೆಗೆ ಕೈಗೊಳ್ಳದಷ್ಟು ಕಠಿಣ ಆರ್ಥಿಕ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇರಾನ್‌ಗೆ ಯಾವುದೇ ರೀತಿಯ ನೆರವು ನೀಡದಂತೆ ಇತರ ದೇಶಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಹಣಕಾಸು ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳ ಮೂಲಕ ಇರಾನ್‌ಗೆ ನೆರವು ನೀಡಿದರೆ ಸಂಬಂಧಪಟ್ಟ ದೇಶಗಳು ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇರಾನ್‌ನ ತೈಲ ಕಳ್ಳಸಾಗಣೆ, ಹಣ ವರ್ಗಾವಣೆ, ವಿನಿಮಯ ವ್ಯವಸ್ಥೆ ಹಾಗೂ ಹಡಗು ನೋಂದಣಿ ಸೇರಿದಂತೆ ಇರಾನ್‌ನ ಆರ್ಥಿಕ ವ್ಯವಸ್ಥೆಗೆ ನೆರವಾಗುವ ಮಾರ್ಗಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರರಾಗಿ ಚೀನಾ, ಭಾರತ, ಟರ್ಕಿ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಗುರುತಿಸಿಕೊಂಡಿವೆ. ಹೀಗಾಗಿ ಟ್ರಂಪ್ ಅವರ ಈ ಎಚ್ಚರಿಕೆ ಇರಾನ್ ಜೊತೆ ವ್ಯಾಪಾರ ನಡೆಸುವ ಹಲವು ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img