- ವಿಜಯಸಾಕ್ಷಿ ಸುದ್ದಿ, ಗದಗ
ಖದೀಮರು ಎಟಿಎಂ ಹೊರಗಿನ ಸಿಸಿ ಕ್ಯಾಮೆರಾಕ್ಕೆ ಸ್ಟಿಕರ್ ಹಚ್ಚಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ
ನಗರದ ಹಾತಲಗೇರಿ ರಸ್ತೆಯಲ್ಲಿರುವ ಎಸ್ ಬಿ ಐ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.
ಇದನ್ನೂ ಒದಿ ಕಳ್ಳತನ ತಡೆಯಲು ಹೋದ ಗೂರ್ಖಾ ಥಳಿಸಿ ಪರಾರಿಯಾದ ದರೋಡೆಕೊರರು
ಗ್ಯಾಸ್ ಮಷಿನ್ ನಿಂದ ಎಟಿಎಂ ಯಂತ್ರ ಕೊರೆಯಲೆತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಎಲ್ಲವೂ ಸುಭದ್ರವಾಗಿದೆ. ಬೆಳಿಗ್ಗೆ ಗ್ರಾಹಕರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಗರದ ಬಡಾವಣೆ ಪೊಲೀಸರು
ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿ ಬೆರಳಿನ ಗುರುತು ತೆಗೆದುಕೊಂಡು ಹೋಗಿದ್ದಾರೆ ಎಂದು ಎಸ್ ಬಿಐ ಬ್ಯಾಂಕ್ ನೌಕರ ಆಕಾಶ್ ಎಂಬುವವರು ತಿಳಿಸಿದ್ದಾರೆ.
ಇದನ್ನೂ ಓದಿ ಮದುವೆಯಾಗುತ್ತೇನೆಂದು ನಂಬಿಸಿ ಮೋಸವೆಸಗಿದ ಯುವಕ: ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ
ಈ ಕುರಿತು ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.