22.8 C
Gadag
Saturday, December 9, 2023

ಕಾನೂನು ಬಾಹಿರ ಚಟುವಟಿಕೆ: ಗದಗ ಜಿಲ್ಲೆಯ ಮೂವರು ಸಮಾಜಘಾತುಕರ ಗಡಿಪಾರು

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಈರಣ್ಣ ಶಂಕರಪ್ಪ ಸೀಮಿಕೇರೆ, ಶಿವನಗೌಡ ವೀರನಗೌಡ ಪಾಟೀಲ್ ಹಾಗೂ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮುಸ್ತಾಕ್ ಜಿನ್ನಾಸಾಬ್ ದೊಡ್ಡಮನಿ ಗಡಿಪಾರಾದ ಮಟಕಾ ಬುಕ್ಕಿಗಳಾಗಿದ್ದಾರೆ.

ಸಮಾಜಕ್ಕೆ ಧಕ್ಕೆ ಹಾಗೂ ಸ್ವಾಸ್ಥ್ಯ ಹಾಳು ಮಾಡುವಂತ ಒಸಿ/ ಮಟಕಾ ಜೂಜಾಟದಲ್ಲಿ ತೊಡಗಿದ್ದ ಹಾಗೂ ಜನರನ್ನು ಪ್ರೇರೇಪಿಸುವಂತ ಮೂವರು ವ್ಯಕ್ತಿಗಳನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ, ಗದಗ ಎಸ್ಪಿ ಯತೀಶ್ ಎನ್ ಆದೇಶ ಹೊರಡಿಸಿದ್ದಾರೆ.

ಇವರ ಗಡಿಪಾರು ಆದೇಶ ಮಾಡಿರುವ ಗದಗ ಎಸ್ಪಿ ಯತೀಶ್ ಎನ್, ಇವರು ಸಾರ್ವಜನಿಕ ಆಸ್ತಿ ಮತ್ತು ಜನರ ಜೀವಹಾನಿ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಲ್ಲದೇ, ಕಾನೂನಿನ ಭಯವಿಲ್ಲದೇ ಕಾನೂನು ಬಾಹಿರ ಚಟುವಟಿಕೆ ಮುಂದುವರೆಸಿಕೊಂಡ ಬಂದ ಹಿನ್ನೆಲೆಯಲ್ಲಿ ಇವರನ್ನು ಗಡಿಪಾರು ಮಾಡಲಾಗಿದೆ ಎಂದಿದ್ದಾರೆ.

ಗಡಿಪಾರಾದ ವ್ಯಕ್ತಿಗಳಲ್ಲಿ ಈರಣ್ಣ ಸೀಮಿಕೆರಿ ಮೇಲೆ 5 ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು, ಈತನನ್ನು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಗಡಿಪಾರು ಮಾಡಲಾಗಿದೆ. ಶಿವನಗೌಡ ಪಾಟೀಲ್ ನಿಗೂ 5 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಮುಸ್ತಾಕ್ ದೊಡ್ಡಮನಿಗೆ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬಳ್ಳಾರಿ ಜಿಲ್ಲೆ ಕೌಲ್ ಬಜಾರ್ ಗೆ ಗಡಿಪಾರು ಮಾಡಲಾಗಿದೆ.

ಈ ಬಗೆಯ ಕಾನೂನು ಬಾಹೀರಾ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿಕೊಂಡರೆ ಅವರಿಗೂ ಸಹ ಇದೇ ಬಗೆಯ ಶಿಕ್ಷೆ ಕಾದಿದೆ ಎಂದು ಎಸ್ಪಿ ಯತೀಶ್ ಎನ್ ಎಚ್ಚರಿಕೆ ನೀಡಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts