ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ:
ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರವಾಗಿ ಮಹಿಳಾ ಮಣಿಗಳು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದ ವಿವಿಧ ಕಡೆ ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು. ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಸಂಚಾಲಕರಾದ ಸುಜಾತ ದೊಡ್ಡಮನಿ ಹಾಗೂ ಕಾಂಗ್ರೆಸ್ ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನೀಲಮ್ಮ ಬೋಳನವರ, ನೇತೃತ್ವದಲ್ಲಿ ವಿನಾಯಕ ನಗರ, ಬಸ್ತಿಬಣ, 6 ನೇ ವಾರ್ಡ್ ನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಮನೆ ಮನೆ ಪ್ರಚಾರ ಕೈಗೊಂಡು ಕುಬೇರಪ್ಪ ಅವರಿಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡುವಂತೆ ಮನವಿ ಮಾಡಿದರು.
ಲಕ್ಷ್ಮೇಶ್ವರ ಪುರಸಭೆ ಮಾಜಿ ಅಧ್ಯಕ್ಷರಾದ ರಾಜಣ್ಣ ಕುಂಬಿ, ಜಯಕ್ಕ ಕಳ್ಳಿ, ವಿಜಯ ಕರಡಿ, ನಾಮನಿರ್ದೇಶನ ಸದಸ್ಯರಾದ ಅಂಬರೀಶ್ ತೆಂಬದಮನಿ, ಮುಖಂಡರಾದ ಸೋಮಣ್ಣ ಯತ್ನಳ್ಳಿ, ಗದಗ ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಕುಸುಮಾ ಬೆಳಗಟ್ಟಿ, ಡಾ.ಎಸ್ ಎಮ್ ವಾಲಿ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.