ಕೊಪ್ಪಳ ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಮತ್ತೆ ಅಧ್ಯಕ್ಷರಾಗಿ ಕೆ.ರಾಜಶೇಖರ ಹಿಟ್ನಾಳ ಆಯ್ಕೆ

0
Spread the love

ಬಿಎಸ್ಕೆ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿ.ಪಂ.ಅಧ್ಯಕ್ಷರಾಗಿದ್ದ ವಿಶ್ವನಾಥರಡ್ಡಿ ಅವಿಶ್ವಾಸದಿಂದ ಖಾಲಿ ಉಳಿದಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ರಾಜಶೇಖರ ಹಿಟ್ನಾಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ, ಹಾಗೂ ಬಿಜೆಪಿಯಿಂದ ಗಂಗಮ್ಮ ಈಶಪ್ಪ ಗುಳಗಣ್ಣವರ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿಜೆಪಿಯ ಗಂಗಮ್ಮ ಈಶಪ್ಪ ಗುಳಗಣ್ಣವರು ೫ ಮತಗಳು ಪಡೆದರೆ, ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ ೨೩ ಮತಗಳನ್ನು ಪಡೆಯುವುದರ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಡಾ.ಎಂ.ವಿ.ಪ್ರಸಾದ್ ಘೋಷಣೆ ಮಾಡಿದ್ದಾರೆ.
೨೯ ಸ್ಥಾನ ಹೊಂದಿದ್ದ ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್ ೧೭, ಬಿಜೆಪಿ ೧೧, ಹಾಗೂ ಓರ್ವ ಪಕ್ಷೇತರ ಹೊಂದಿದ್ದರು. ಆದರೆ ಕಾಂಗ್ರೆಸ್ ಬಹುಮತವಿದ್ದ ಜಿ.ಪಂ.ಯಲ್ಲಿ ವಿಶ್ವನಾಥರಡ್ಡಿ ಹೊಸಮನಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ವಿಶ್ವನಾಥರಡ್ಡಿ ಅವರ ಅಧಿಕಾರದ ಅವಧಿ ಮುಗಿದರೂ ಕೂಡ ಅಧಿಕಾರ ಬಿಟ್ಟು ಕೊಡದೇ ಇದ್ದುದರಿಂದ ಬಿಜೆಪಿಯ ೮ ಜನ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್‌ನವರು ವಿಶ್ವನಾಥರಡ್ಡಿಯನ್ನು ಅವಿಶ್ವಾಸ ಮಾಡಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಆದರೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಹುಮತ ವಿದ್ದರೂ ಕೂಡ ರಾಜಶೇಖರ ಹಿಟ್ನಾಳ ಅವರು ಕಾಂಗ್ರೆಸ್‌ನ ೧೭ ಸದಸ್ಯರಲ್ಲಿ ೧೬ ಜನ ಸದಸ್ಯರು ಹಾಗೂ ಬಿಜೆಪಿಯ ೬ಜನ ಹಾಗೂ ಓರ್ವ ಪಕ್ಷೇತರ ಬೆಂಬಲದೊಂದಿಗೆ ೨೩ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ವಿಶ್ವನಾಥರಡ್ಡಿ ಹೊಸಮನಿ ಗೈರು ಆಗಿದ್ದರು.
ಆದರೆ ಬಿಜೆಪಿ ೧೧ ಜನ ಸದಸ್ಯರಿದ್ದರೂ ಕೂಡ ೬ ಜ£ ಸದಸ್ಯರು ಕಾಂಗ್ರೆಸ್‌ನ ರಾಜಶೇಖರ ಪರ ಮತ ಹಾಕಿದ್ದರಿಂದ ಬಿಜೆಪಿಯ ಗಂಗಮ್ಮ ಈಶಣ್ಣ ಗುಳಗಣ್ಣವರ ೫ ಮತಗಳನ್ನು ಪಡೆದುಕೊಂಡು ಪರಾಭವಗೊಂಡರು.
ವಿಜಯೋತ್ಸವ:
ಜಿ.ಪಂ.ಅಧ್ಯಕ್ಷರಾಗಿ ಕೆ. ರಾಜಶೇಖರ ಹಿಟ್ನಾಳ ಅವರು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರಿಂದ ಬಾರಿ ವಿಜಯೋತ್ಸವ ಆಚರಿಸಿದರು.
ಜಿಲ್ಲಾಡಳಿತ ಎದುರಿಗೆ ರಸ್ತೆಯಲ್ಲಿ ಕೊರೋನಾ ಸೊಂಕು ಭಯವಿಲ್ಲದೆ ವಿವಿಧ ಗ್ರಾಮಗಳಿಂದ ಆಗಮಿಸಿ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರು ವಿವಿಧ ವಾಧ್ಯಮೇಳಗಳ ಸದ್ದುನೊಂದಿಗೆ ಪಟಾಕಿ ಸಿಡಿಸಿ ಪಕ್ಷದ ಧ್ವಜವನ್ನು ಹಿಡಿದುಕೊಂಡು ವಿಜಯೋತ್ಸವ ಆಚರಿಸಿದರು.


Spread the love

LEAVE A REPLY

Please enter your comment!
Please enter your name here