ವಿಜಯಸಾಕ್ಷಿ ಸುದ್ದಿ, ಕಲಬುರಗಿ: 500, 200, 100 ಮುಖಬೆಲೆಯ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸೇಡಂನಲ್ಲಿ ನಡೆದಿದೆ. ಈ ಎಲ್ಲಾ ನೋಟುಗಳು ಹೊಸ ರೂಪದ ನೋಟುಗಳೆನ್ನುವುದು ಗಮನಾರ್ಹವಾಗಿದೆ.
ಖೋಟಾ ನೋಟು ಸಾಗಿಸುತ್ತಿದ್ದ
ಚಿಂಚೋಳಿ ರಸ್ತೆಯ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದೀನ್ ಚಿನ್ನುಸಾಬ ಮಳಗಿ ಎಂಬಾತನನ್ನು ಖೋಟಾ ನೋಟು ಸಹಿತ ಪೊಲೀಸರು ಬಂಧಿಸಿದ್ದಾರೆ. ಡಿಸಿಐಬಿ ಪಿಎಸ್ಐ ಪರಶುರಾಮ ವನಂಜಕರ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಾವುದ್ದೀನ್ ನನ್ನು ಬಂಧಿಸಿದ್ದು, ಆತನಿಂದ
500, 200 ಮತ್ತು 100 ರೂಪಾಯಿ ಮುಖಬೆಲೆಯ 4.22 ಲಕ್ಷ ನಕಲಿ ನೋಟುಗಳು, ಒಂದು ಬೈಕ್ ಹಾಗೂ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.
ಖೋಟಾನೋಟುಗಳನ್ನು ಎಲ್ಲಿಗೆ ಕೊಂಡೊಯ್ಯಲು ಯತ್ನಿಸುತ್ತಿದ್ದ, ಎಲ್ಲಿಂದ ತಂದಿದ್ದ, ಎಲ್ಲಿ ಪ್ರಿಂಟ್ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಮುಂದುವರೆಸಿರುವುದಾಗಿ ಪಿಎಸ್ಐ ನಾನಾಗೌಡ ಅವರು ತಿಳಿಸಿದ್ದಾರೆ.
ಅಲ್ಲಾವುದ್ದೀನ್, ಕೆಲ ಪ್ರಮುಖ ವ್ಯಕ್ತಿಗಳ ಮುಖಾಂತರ ನೋಟು ಚಲಾವಣೆ ಮಾಡ್ತಿದ್ದ, ಕಮಿಷನ್ ಆಧಾರದ ಮೇಲೆ ಹಣ ಸಾಗಾಟ ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆಯೂ ಸಹ ಖೋಟಾನೋಟು ಚಲಾವಣೆ ಪ್ರಕರಣದಲ್ಲಿ ಅಲ್ಲಾವುದ್ದೀನ್ ಬಂಧಿತನಾಗಿದ್ದ ಎಂದು ತಿಳಿದು ಬಂದಿದೆ.