ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಗೂಗಲ್ ಪ್ಲೇಸ್ಟೋರ್‌ನಿಂದ ಪೇಟಿಎಂ ಆ್ಯಪ್ ಅನ್ನು ಗೂಗಲ್ ತೆಗೆದು ಹಾಕಿದೆ. ಆದರೆ ಪೇಟಿಎಂ-ಫಾರ್-ಬಿಸಿನೆಸ್, ಪೇಟಿಎಂ ಮಾಲ್, ಪೇಟಿಎಂ ಮನಿ ಆ್ಯಪ್‌ಗಳನ್ನು ತೆಗೆಯಲಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಪೇಟಿಎಂ, ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿದೆ.
ಗೂಗಲ್ ಕೂಡ ಖಚಿತ ಕಾರಣ ನೀಡಿಲ್ಲವಾದರೂ, ಅದರ ಬ್ಲಾಗ್‌ನಲ್ಲಿ, ‘ನಾವು ಕ್ಯಾಸಿನೊ ಅಥವಾ ಇತರ ಕಾನೂನುಬಾಹಿರ ಬೆಟ್ಟಿಂಗ್, ಜೂಜಿಗೆ ಆಸ್ಪದ ಮಾಡಿಕೊಡುವ ಆ್ಯಪ್‌ಗಳನ್ನು ಬೆಂಬಲಿಸುವುದಿಲ್ಲ. ಯಾವುದಾದರೂ ಆ್ಯಪ್ ಅಂತಹ ಜೂಜಿನ ಸ್ಪೋರ್ಟಿಂಗ್ ವೆಬ್‌ಸೈಟ್‌ಗಳಿಗೆ ಲಿಂಕ್ ಕೊಡುತ್ತಿದ್ದರೆ ಅಂತವಕ್ಕೆ ಪ್ಲೇಸ್ಟೋರ್‌ನಲ್ಲಿ ಜಾಗವಿಲ್ಲ’ ಎಂದಿದೆ.
ಮತ್ತೆ ವಾಪಸ್ಸಾದ ಪೇಟಿಎಂ!
ಗೂಗಲ್ ಪ್ಲೇಸ್ಟೋರ್‌ನಿಂದ ಶುಕ್ರವಾರ ಹೊರ ಹಾಕಲ್ಪಟ್ಟಿದ್ದ ಪೇಟಿಎಂ ರಾತ್ರಿ ಹೊತ್ತಿಗೆ ಮತ್ತೆ ಪ್ಲೇಸ್ಟೋರ್‌ನಲ್ಲಿ ವಾಪಸ್ಸಾಗಿದೆ. ಪೇಟಿಎಂ ವಿವರಣೆ ಗೂಗಲ್‌ಗೆ ಸರಿ ಎನಿಸಿದ ಮೇಲೆ ಈ ಕ್ರಮ ತೆಗೆದುಕೊಂಡಿದೆ.