ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ತಾಲೂಕಿನ ತಿಮ್ಮಾಪೂರ ಗ್ರಾಮದ ಗ್ರಾಮ ಪಂಚಾಯಿತಿ ಸಂಯೋಗದಲ್ಲಿ ಮಂಗಳವಾರ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಸ್ವಮಿತ್ವ ಯೋಜನೆಯ ಗ್ರಾಮ ಸಭೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಅಧಿಕಾರಿಗ ಶೈಲೇಂದ್ರ ಬಿರಾದಾರ, ಸ್ವಮಿತ್ವ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮಿಣ ಭಾಗದ ಗ್ರಾಮ ಪಂಚಾಯತಿಗೆ ಒಳಪಡುವ ಎಲ್ಲಾ ಮನೆ ಹಾಗೂ ಪ್ಲಾಟುಗಳನ್ನು ದ್ರೋಣ್ ಕ್ಯಾಮೆರಾ ಮೂಲಕ ಸರ್ವೆ ಮಾಡಿ ಕಂಪ್ಯೂಟರ್ ಉತಾರಗಳನ್ನು ಮಾಡಿಕೊಡಲಾಗುವುದು.
ಈ ಯೋಜನೆಯಿಂದ ಗ್ರಾಮದ ಎಲ್ಲಾ ಆಸ್ತಿ ಕಂಪ್ಯೂಟರೀಕರಣಗೊಂಡು, ತಮಗೆ ಬೇಕಾದಾಗ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಿಮ್ಮ ಆಸ್ತಿ ಮನೆ ಹಾಗೂ ಪ್ಲಾಟುಗಳ ಈ ಸ್ವತ್ತು ಉತ್ತಾರಗಳನ್ನು ಪಡೆಯಬಹುದು ಎಂದರು.
ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಸ್ವಮಿತ್ವ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದ್ದು ಮನೆ ಹಾಗೂ ಪ್ಲಾಟುಗಳನ್ನು ಖರೀದಿ ಮಾಡಲು, ಕಂಪ್ಯೂಟರ್ ಉತಾರಗಳ ಅವಶ್ಯಕತೆಯಿದ್ದು ಈ ಯೋಜನೆಯಿಂದ ಗ್ರಾಮದ ಎಲ್ಲಾ ಆಸ್ತಿ ಕಂಪ್ಯೂಟರೀಕರಣಗೊಂಡು ಯಾವುದೇ ಸಮಯದಲ್ಲಿ ಉತಾರಗಳನ್ನು ಪಡೆಯಬಹುದು. ಯೋಜನೆಯ ಪ್ರಯೋಜನವನ್ನು ಗ್ರಾಮದ ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಂಗಲಾ ಪತ್ತಾರ, ಕಾರ್ಯದರ್ಶಿ ಕೋಟೇಶ್ವರ ಓಲಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.