ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದ 3,16,500 ಮೌಲ್ಯದ ಚಿನ್ನಾಭರಣ ವಸ್ತುಗಳು ಮತ್ತು ನಗದು ಹಣ ದೋಚಿದ್ದ ಆರೋಪಿಯನ್ನು ಕುಕನೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.
Advertisement
ಬಂಧಿತ ಆರೋಪಿಯನ್ನು ಶಿವಯೋಗೆಪ್ಪ ಅಲಿಯಾಸ್ ಶಿವು ತಂದೆ ಶೇಖಪ್ಪ ಸುರತಾನಿ (25) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.