ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 55 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡು, ಅದನ್ನು ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
Advertisement
ತಾಲೂಕಿನ ಕೋಟುಮಚಗಿ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 443/4 ರಲ್ಲಿ ಕಾಂತಪ್ಪ ಕೆಂಚಪ್ಪ ಮೇಟಿ ಎಂಬುವರಿಗೆ ಸೇರಿದ ಹೊಲದಲ್ಲಿ ಈ ಗಾಂಜಾ ಬೆಳೆದಿದ್ದು, ಆರೋಪಿ ಕಾಂತಪ್ಪನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಆರು ಹಸಿ ಗಾಂಜಾ ಗಿಡಗಳು ಹೂ ತೆನೆ ಬೀಜಗಳು ಸೇರಿದಂತೆ ಇದರ ಒಟ್ಟು ಮೌಲ್ಯ 55 ಸಾವಿರವಾಗಿದೆ.
ಗದಗ ಅಬಕಾರಿ ಡಿಸಿ ಮೋತಿಲಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಗದಗ ವಲಯ ಹಾಗೂ ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು ನಡೆಸಿದ್ದಾರೆ. ಈ ಕುರಿತು ಗದಗ ಅಬಕಾರಿ ವಲಯ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.