ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
Advertisement
ಕಳೆದ ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸಾಕುಪ್ರಾಣಿಯ ಪ್ರಾಣ ಉಳಿಸಿದ ರೈತನೊಬ್ಬನ ವಿಡಿಯೋ ಈಗ ವೈರಲ್ ಆಗಿದೆ.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸಾಕುಪ್ರಾಣಿ ಬೆಕ್ಕು ಬಾವಿಯಲ್ಲಿ ಬಿದ್ದು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಜೀವ ಕಾಪಾಡಿ ಎಂದು ಪೊದೆಯ ಮೇಲೆ ಕುಳಿತು ತನ್ನ ಆರ್ತನಾದದ ಮೂಲಕ ಹೊರಹಾಕುತ್ತಿತ್ತು.
ಇದನ್ನು ಗಮನಿಸಿದ ಗ್ರಾಮದ ರೈತ ಮಹಾಂತೇಶ್ ತನ್ನ ಪ್ರಾಣವನ್ನು ಲೆಕ್ಕಿಸದೇ ಗೆಳಯರ ಸಹಾಯದಿಂದ ಹಗ್ಗದ ಮೂಲಕ ಬಾವಿಯಲ್ಲಿ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾನೆ.
ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯ ಸ್ಥಳೀಯ ಯುವಕರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ.
ಬೆಕ್ಕಿನ ಜೀವ ಉಳಿಸಿದ ರೈತ ಮಹಾಂತೇಶ್ ನ ಮಾನವೀಯ ಕಾರ್ಯಕ್ಕೆ ಎಲ್ಲಡೇ ಮೆಚ್ಚುಗೆ ವ್ಯಕ್ತವಾಗಿದೆ.