ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಲಾಕ್‌ಡೌನ್ ಮತ್ತು ಕೊವಿಡ್ ಬಿಕ್ಕಟ್ಟುಗಳ ಕಾರಣದಿಂದ ಹಲವು ತಿಂಗಳಿನಿಂದ ಪ್ರವಾಸಿಗರಿಗೆ ಮುಚ್ಚಲ್ಪಟ್ಟಿದ್ದ ತಾಜ್‌ಮಹಲ್ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ. ಕುತೂಹಲದ ವಿಷಯ ಎಂದರೆ, ಪುನರಾರಂಭದ ನಂತರ ಮೊದಲ ವಿಸಿಟರ್ ಚೀನಾದ ನಾಗರೀಕ ಎನ್ನುವುದು!
Advertisement
ಸೋಮವಾರ ಬೆಳಿಗ್ಗೆ 5.39ಕ್ಕೆ ಚೀನಾದ ಲಿಯಾಂಗ್ ಚಿಯಾಚೆಂಗ್ ಎಂಬ ವ್ಯಕ್ತಿಯ ಪ್ರವೇಶದೊಂದಿಗೆ ಮಾರ್ಚ್ ನಿಂದ ಬಂದ್ ಆಗಿದ್ದ ತಾಜ್‌ಮಹಲ್ ಮತ್ತೆ ಜನರಿಗೆ ತೆರೆದುಕೊಂಡಿದೆ. ಇದೇನೂ ವಿಶೇಷ ಸುದ್ದಿಯಲ್ಲವಾದರೂ, ಕೆಲವು ಗುಂಪುಗಳಿಗೆ ಇದು ಆಘಾತಕಾರಿ ಸುದ್ದಿಯೇ ಅನಿಸಬಹುದು!
ಸದ್ಯ ದಿನಕ್ಕೆ 5 ಸಾವಿರ ಜನರಿಗೆ ಮಾತ್ರ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ ಮೊದಲ ದಿನ ಶೇ.25ರಷ್ಟು ಟಿಕೆಟ್ ಮಾತ್ರ ಮಾರಾಟವಾಗಿದ್ದವು.