ವಿಜಯಸಾಕ್ಷಿ ಸುದ್ದಿ, ಗದಗ
ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಜಗಳವಾಗಿ ಉಡಾಳ ವಿದ್ಯಾರ್ಥಿಯೊಬ್ಬನಿಗೆ ಪೊಲೀಸಪ್ಪ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ತನ್ನ ಪಾಡಿಗೆ ತಾನು ಕುಳಿತಿದ್ದ ವಿದ್ಯಾರ್ಥಿಗೆ ಇನ್ನೋರ್ವ ವಿದ್ಯಾರ್ಥಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲೇ ಇದ್ದ ನಿಯಂತ್ರಾಣಾಧಿಕಾರಿ ಸುಮ್ಮನಿದ್ದ ವಿದ್ಯಾರ್ಥಿಗೆ ಯಾಕೆ ಹೊಡೀತಿಯಾ? ಬಾ ಪೊಲೀಸ್ ಸ್ಟೇಷನ್ ಗೆ ಹೋಗೋಣವೆಂದು ಎಳೆದಾಡಿದ್ದಾರೆ.
ಖಾಸಗಿ ಕಾಲೇಜ್ ಹಾಗೂ ಸರಕಾರಿ ಕಾಲೋಜಿನ ವಿದ್ಯಾರ್ಥಿಗಳಿಬ್ಬರ ಮಧ್ಯೆ ಜಗಳ ನಡೆದಿದ್ದು, ಗೊತ್ತು ಪರಿಚಯವಿಲ್ಲದ
ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಯನ್ನು ಕರೆದು ಸರಕಾರಿ ಕಾಲೇಜಿನ ವಿದ್ಯಾರ್ಥಿ ಥಳಿಸಿದ್ದಾನೆ.
ಸುಖಾಸುಮ್ಮನೆ ಕಾರಣವಿಲ್ಲದೇ ಥಳಿಸಿದ ಸರಕಾರಿ ಕಾಲೇಜು ವಿದ್ಯಾರ್ಥಿಗೆ ಟ್ರಾಫಿಕ್ ಪೊಲೀಸರೊಬ್ಬರು ರೌಡಿಸಂ ಪ್ರದರ್ಶಿಸಿದ ಉಡಾಳ ವಿದ್ಯಾರ್ಥಿಗೆ ತಕ್ಕ ಪಾಠ ಕಲಿಸಿದ್ದಾರೆ.
ರೌಡಿಸಂ ಮಾಡ್ತೀಯಾ? ಗೂಂಡಾಗಿರಿ ಮಾಡ್ತೀಯಾ ಎಂದು ಕಪಾಳಮೋಕ್ಷ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ. ಸಂಚಾರಿ ಠಾಣೆಯ ಪೇದೆಯ ಈ ಬುದ್ದಿ ಮಾತಿಗೆ ನೆರೆದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.