ವಿಜಯಸಾಕ್ಷಿ ಸುದ್ದಿ, ತುಮಕೂರು
ಜೆಡಿಎಸ್, ಬಿಜೆಪಿ ಜೊತೆ ಕೈ ಜೋಡಿಸಿದರೆ ಜೆಡಿಎಸ್ ಕೆಲ ಶಾಸಕರು ಪಕ್ಷ ತೋರೀತಾರಾ? ಎನ್ನುವ ಮೂಲಕ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರಶ್ನೆ ಹುಟ್ಟು ಹಾಕಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಕೈ ಜೋಡಿಸಿದರೆ ಪಕ್ಷ ತೊರೀತೀನಿ. ನಾನು ಬಿಜೆಪಿ ನಿಲುವುಗಳನ್ನು ವಿರೋಧಿಸಿದವನು. ವಾಮ ಮಾರ್ಗದಲ್ಲಿ ಅಧಿಕಾರ ಅನುಭವಿಸುವ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ನಿಲುವಿಗೆ ಅನೇಕ ಶಾಸಕರ ವಿರೋಧವಿದೆ. ನನ್ನ ಸ್ನೇಹಿತರೂ ಇದ್ದಾರೆ, ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಶ್ರೀನಿವಾಸ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ನ ಇತರ ಶಾಸಕರಿಗೆ ಪಕ್ಷ ಬಿಡುವ ಒಲವಿದೆ. ಸುಮಾರು ಜನ ಶಾಸಕರುಗಳಿಗೆ ಆ ಮನಸ್ಥಿತಿ ಇದೆ.
ಅಸಮಾಧಾನವಿದೆ ಎಂದಾಗ ಅನೇಕರು ಪಕ್ಷ ತೊರೆಯುವ ಬಗ್ಗೆ ಚರ್ಚೆಯಾಗಿದೆ ಅಂತಲೇ ಅರ್ಥ.
ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಎಸ್.ಆರ್.ಶ್ರೀನಿವಾಸ್ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.