ವಿಜಯಸಾಕ್ಷಿ ಸುದ್ದಿ, ಕನಕಗಿರಿ:
ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಅರಳಹಳ್ಳಿ ಮಧ್ಯದಲ್ಲಿ ಎರಡು ಬೈಕ್ ಗಳ ಮಧ್ಯ ಭೀಕರ ಅಪಘಾತ ಸೋಮವಾರ ರಾತ್ರಿ ನಡೆದಿದೆ,
ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಒಬ್ಬರು ಸ್ಥಳದಲ್ಲೇ ಮಲಕನಮರಡಿ ಗ್ರಾಮದ ಶಂಕ್ರಪ್ಪ (30) ಮೃತಪಟ್ಟರೆ, ಇನ್ನೊಬ್ಬರು ಸಹ ಮಲಕನಮರಡಿ ಗ್ರಾಮದ ವೆಂಕಟೇಶ(40) ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಒಂದು ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದರು ಎನ್ನಲಾಗುತ್ತಿದೆ.
ಇನ್ನೊಂದು ಬೈಕ್‌ನಲ್ಲಿ ಗಂಗಾವತಿ ನಗರದ ಗುಂಡಮ್ಮಕ್ಯಾಂಪ್ ನಿವಾಸಿ ಮೌಲಾಹುಸೇನ್ (25) ತನ್ನ ಸಹೋದರ ಮಾವನ ಮದುವೆಗಾಗಿ ಮುದ್ಗಲ್ ಪಟ್ಟಣಕ್ಕೆ ಒಬ್ಬನೇ ಸಂಚರಿಸುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
ಮೌಲಾಹುಸೇನ್‌ನ ತಂದೆ ಕೆಲ ದಿನಗಳ ಹಿಂದ ಸಾವನ್ನಪ್ಪಿದ್ದರು. ಇರುವವನು ಒಬ್ಬನೇ ಮಗ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲಕನಮರಡಿ ಗ್ರಾಮದ ಇನ್ನೊರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪಘಾತಕ್ಕೆ ಕಾರಣ..!
ಗಂಗಾವತಿ ಭಾಗದಲ್ಲಿ ಈಗ ಭತ್ತ ಕಟಾವು ನಡೆಯುತ್ತಿದೆ. ಅದರಿಂದ
ಗಂಗಾವತಿಯಿಂದ ಕನಕಗಿರಿ ರಸ್ತೆಯಲ್ಲಿ ಎಲ್ಲಾ ರೈತರು ರಾಜ್ಯ ಹೆದ್ದಾರಿ ಪಕ್ಕದಲ್ಲೇ ಭತ್ತದ ರಾಶಿ ಹಾಕಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅನೇಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಮತ್ತು ಗಾಯಗೊಂಡ ಉದಾಹರಣೆಗಳು ಸಾಕಷ್ಟು ಇವೆ.
ರೈತರು ಇದಕ್ಕೆ ಪರ್ಯಾಯವಾಗಿ ರಸ್ತೆ ಬಿಟ್ಟು ಬೇರಡೆ ವ್ಯವಸ್ಥೆ ಮಾಡಿದ್ದೆ ಆದಲ್ಲಿ ಅಪಘಾತ ತಡೆಯಬಹುದು ಎನ್ನಲಾಗುತ್ತಿದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.