ವಿಜಯಸಾಕ್ಷಿ ಸುದ್ದಿ, ಗದಗ
ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ನಡೆದಿದೆ.
ಅಡವಿಸೋಮಾಪೂರ ಗ್ರಾಮದ ಪೀರಸಾಬ ಕುಮನೂರ (55) ಸ್ಥಳದಲ್ಲೆ ಮೃತಪಟ್ಟಿರುವ ದುರ್ದೈವಿ.

ರಸ್ತೆ ಕಾಮಗಾರಿಗೆ ಮಣ್ಣು ಸಾಗಿಸುತ್ತಿದ್ದ BSCPL ಒಡೆತನದ ವಾಹನ ಇದಾಗಿದ್ದು, ನಿತ್ಯ ಸಾಮರ್ಥ್ಯಕ್ಕಿಂತ ಮಿತಿಮೀರಿ ಮಣ್ಣು ಸಾಗಿಸುತ್ತಿವೆ. ಟಿಪ್ಪರ್ ಗಳ ಹಾವಳಿಯಿಂದ ಇಲ್ಲಿನ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಇನ್ನು ಬೈಕ್ ಗೆ ಡಿಕ್ಕಿ ಹೊಡೆದದ್ದರಿಂದ ಸ್ಥಳೀಯರು ರಸ್ತೆ ತಡೆ ನಡೆಸಿ
BSCPL ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.