ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:
ಜಾನುವಾರುಗಳನ್ನು ಮೇಯಿಸಲು ಬೆಟ್ಟದ ಪ್ರದೇಶಕ್ಕೆ ತೆರಳಿದ್ದ ಮಹಿಳೆ ಚಿರತೆ ದಾಳಿಗೆ ತುತ್ತಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಬಳಿ ನಡೆದಿದೆ.
ಚಿಕ್ಕರಾಂಪುರ ಗ್ರಾಮದ ಮಾಬಮ್ಮ (55) ಗಾಯಾಗೊಂಡಿದ್ದು, ಇವರ ಕತ್ತು, ಕಿವಿ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾನೆಯ ಸಮಯದಲ್ಲಿ ಜಾನುವಾರು ಮೇಯಿಸಲು ಬೆಟ್ಟಕ್ಕೆ ಹೋಗಿದ್ದಾರೆ.
ಇದನ್ನು ಕಂಡು ಹೊಂಚು ಹಾಕಿದ್ದ ಚಿರತೆ ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದೆ. ಇದಕ್ಕೆ ಎದೆಗುಂದದೆ ಮಹಿಳೆ ಚಿರತೆಯಿಂದ ತಪ್ಪಿಸಿಕೊಂಡು ಗ್ರಾಮದ ಕಡೆ ಚೀರುತ್ತಾ ಬಂದಿದ್ದಾಳೆ.
ತಕ್ಷಣ ಗಮನಿಸಿದ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪರಣ್ಣ ಮನವಳ್ಳಿ, ಗಾಯಾಳು ಮಹಿಳೆಗೆ ಸಾಂತ್ವನ ಹೇಳಿದರು. ಕೂಡಲೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆಯೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳೆ ಮೇಲೆ ಚಿರತೆ ದಾಳಿ, ಸ್ಥಿತಿ ಗಂಭೀರ
Advertisement