ವಿಜಯಸಾಕ್ಷಿ ಸುದ್ದಿ, ರಾಯಚೂರು
ಯಡಿಯೂರಪ್ಪ ಮೇಲೆ ಅಪಾರ ನಂಬಿಕೆ ಇತ್ತು. ಅವರಿಗೆ ಸನ್ (ಮಗ ವಿಜಯೇಂದ್ರ ) ಸ್ಟ್ರೋಕ್ ಆಗಿದೆ. ಕಾಂಗ್ರೆಸ್, ಜನತಾ ಪರಿವಾರವೂ ಸನ್ ಸ್ಟ್ರೋಕ್ ನಲ್ಲಿ ಮುಗಿದಿತ್ತು, ಬಿಜೆಪಿಯೂ ಹಾಗೆ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.
ರಾಯಚೂರಿನಲ್ಲಿ ಮಾತನಾಡಿದ ಅವರು, ಯಾರ ಭಿಕ್ಷೆ, ತ್ಯಾಗದಿಂದ ನೀವು ಸಿಎಂ ಆಗಿದ್ದಿರಿ ಎಂಬುವುದನ್ನ ಮರೆತಿದ್ದಿರಿ. ಸಂಪುಟ ರಚನೆಯಲ್ಲಿ ಹೈಕಮಾಂಡ್ ಒತ್ತಡವಿಲ್ಲ. ಹಣದ
ಒತ್ತಡದಿಂದ ಮಂತ್ರಿ ಮಂಡಲ ರಚನೆಯಾಗಿದೆ. ಮಾತು ತಪ್ಪಿದ ಬಿಎಸ್ ವೈ, ನಾಲಿಗೆ ಇಲ್ಲದ ಯಡಿಯೂರಪ್ಪ ಅವರಿಂದ ದಲಿತ ನಾಗೇಶ್ ಹಿಂದುಳಿದ ವರ್ಗದ ಮುನಿರತ್ನಗೆ ಅನ್ಯಾಯವಾಗಿದೆ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ದಲ್ಲಾಳಿ, ಜೈಲು ಸೇರುವಂತಹ ಭ್ರಷ್ಟ ಸಿ.ಪಿ.ಯೋಗಿಶ್ವರ್ ಗೆ ಸಚಿವ ಸ್ಥಾನ ನೀಡಿದ್ದಾರೆ. ಯೋಗಿಶ್ ಮೇಲೆ 9731 ಜನರಿಗೆ ಮನೆ ನೀಡುವುದಾಗಿ ವಂಚನೆ ಮಾಡಿದ್ದಾನೆ. ಇವನ ವಿರುದ್ಧ ವಂಚನೆಗೊಳಗಾದವರು ಗ್ರಾಹಕರ ವೇದಿಕೆ ದೂರು ನೀಡಿದ್ದಾರೆ.
ಅಲ್ಲದೇ, ಗ್ರಾಹಕ ವೇದಿಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಗಂಭೀರ ವಂಚನೆ ಪ್ರಕರಣದಲ್ಲಿ ಯೋಗೇಶ್ವರ್ ಜಾಮೀನು ಮೇಲೆ ಹೊರಗಿದ್ದಾರೆ. ಬೇಲ್ ವೆಕೆಂಟ್ ಆದ್ರೆ ಯೋಗಿಶ್ವರ್ ಜೈಲಿಗೆ ಹೋಗುತ್ತಾನೆ. ಹಾಗಾಗಿ ಸೈನಿಕ ಎಂದಿದ್ದೆ ತಪ್ಪಾಗಿದೆ, ಸೈನಿಕರಿಗೆ ಅವಮಾನ ಮಾಡಿದಂತಾಗಿದೆ ಎಂದು ಸಿಪಿ ಯೋಗಿಶ್ವರ್ ವಿರುದ್ಧ ಕೆಂಡಾಮಂಡಲವಾದರು.
ವಂಶ, ಕುಟುಂಬ ರಾಜಕಾರಣ ಗೆದ್ದಲಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯಡಿಯೂರಪ್ಪ ಕುಟುಂಬ ರಾಜಕಾರಣ ಬಗ್ಗೆ ಹೈಕಮಾಂಡ್ ಗಮನಿಸಬೇಕು ಎಂದು ಎಂಎಲ್ ಸಿ
ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.