ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನುಬೆಂಬಲಿಸಿ ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಗಡಿಯಾರಕಂಬ, ಎಪಿಎಂಸಿ, ಮಾರ್ಕೆಟ್, ಲೇಬರ್ ಸರ್ಕಲ್, ಮುಂತಾದ ಕಡೆ ರೈತ ವಿರೋಧಿ ಕಾನೂನುಗಳು ಇತ್ಯಾದಿ ಕುರಿತು ರೈತರ ಜನೈಕ್ಯ ಹೋರಾಟಕ್ಕೆ ಸಜ್ಜುಗೊಳಿಸುವಂತ ಸಾರ್ವಜನಿಕ ಸಭೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಶರಣು ಪಾಟೀಲ್ ನವೆಂಬರ್ ೨೬ರರಿಂದ ಕೇಂದ್ರ ಸರ್ಕಾರವು ಕೃಷಿ ಕಾನೂನುಗಳಿಗೆ ತಂದಿರುವ ಕೃಷಿ-ವಿರೋಧಿ ಮತ್ತು ಜನ ವಿರೋಧಿ ತಿದ್ದುಪಡಿಗಳನ್ನು ಹಿಮ್ಮೆಟ್ಟಿಸಲು ದೆಹಲಿಯ ಅಸಾಧ್ಯವಾದ ಚಳಿ, ಭದ್ರತಾ ಪಡೆಗಳ ಲಾಠಿ ಏಟು, ಅಶ್ರುವಾಯು ಗುಂಡಗಳಿಗೆ ಹೆದೆಹೊಡ್ದಿ. ಅಸಾಧಾರಣ ಮಹೋನ್ನತ ಹೋರಾಟವನ್ನ ಮತ್ತು ರೈತರ ಬೃಹತ ದ್ವನಿಯನ್ನ ದಿಲ್ಲಿಯಿಂದ ಜಗತ್ತಿಗೆ ಕೇಳುವಂತೆ ಘರ್ಜಿಸಿದ್ದಾರೆ. ಕ್ರೂರ ಸರ್ಕಾರ ಮತ್ತು ಪೊಲೀಸರ ದೌರ್ಜನ್ಯಗಳನ್ನು ದಿಟ್ಟವಾಗಿ ಎದುರಿಸಿ ಚಳವಳಿಯನ್ನು ಮುಂದುವರಿಸಿರುವ ರೈತರಿಗೆ ಅಭಿನಂದನೆಗಳನ್ನು ಸಲ್ಲಿಸಿತ್ತೇವೆ ಎಂದರು.
ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಯಾವುದೇ ಚರ್ಚೆಯಿಲ್ಲದೆ ಕೇಂದ್ರ ಬಿಜೆಪಿ ಸರ್ಕಾರವು ರೈತವಿರೋಧಿ ಕಾಯಿದೆಗಳನ್ನು ಜಾರಿಗೆ ತಂದಿದೆ . ತಮ್ಮ ವಿರೋಧವನ್ನು ವ್ಯಕ್ತ ಪಡಿಸಲು ದೆಹಲಿ ಚಲೋಗೆ ಮುಂದಾದ ರೈತರನ್ನು ಮತ್ತು ಮುಖಂಡರನ್ನು ಬಲವಂತದಿಂದ ತಡೆಯಲಾಗಿದೆ , ಬಂಧಿಸಲಾಗಿದೆ . ಅಶ್ರುವಾಯು , ಜಲಫಿರಂಗಿಗಳನ್ನು ಪ್ರಯೋಗಿಸಿ ಅನ್ನದಾತರ ಮೇಲೆ ದೌರ್ಜನ್ಯ ಎಸಗಲಾಗಿದೆ . ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೂ ತಡೆಯೊಡ್ಡಲಾಗಿದೆ . ಇಂತಹ ಸಂದರ್ಭದಲ್ಲಿ ಇಡೀ ದೇಶದ ಜನತೆ ರೈತರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದರು.
ಕೇಂದ್ರವು ಅಂಗೀಕರಿಸಿದ ಎಪಿಎಂಸಿ ತಿದ್ದುಪಡಿ , ಅಗತ್ಯ ವಸ್ತುಗಳ ತಿದ್ದುಪಡಿ ಮತ್ತು ಗುತ್ತಿಗೆ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳು ನಮ್ಮ ದೇಶದ ಸಣ್ಣ ಮತ್ತು ಮಧ್ಯಮ ರೈತರನ್ನು ಸರ್ವನಾಶಗೊಳಿಸಲಿವೆ . ಸರ್ಕಾರಿ ನಿಯಂತ್ರಣದ ಎಪಿಎಂಸಿಗಳು ಇಲ್ಲವಾದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯೂ ಲಭಿಸುವುದಿಲ್ಲ . ಅಗತ್ಯ ವಸ್ತುಗಳ ಪಟ್ಟಿಯಿಂದ ದಿವಸ ಧಾನ್ಯ , ಬೇಳೆ ಕಾಳು , ಆಹಾರ ಪದಾರ್ಥಗಳನ್ನು ಕೈಬಿಟ್ಟಿರುವುದರಿಂದ ಇವುಗಳ ದಾಸ್ತಾನು , ಕೃತಕ ಅಭಾವ ಮತ್ತು ಬೆಲೆ ಏರಿಕೆಯಿಂದ ಜನಸಾಮಾನ್ಯರೆಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ . ಗುತ್ತಿಗೆ ಕೃಷಿಯಿಂದ ರೈತರು ಬಂಡವಾಳಿಗರ ಕಪಿಮುಷ್ಠಿಯಲ್ಲಿ ಸಿಲುಕುವುದಲ್ಲದೆ , ಆಹಾರ ಬೆಳೆಗಳ ಉತ್ಪಾದನೆ ಕಡಿತಗೊಂಡು , ವಾಣಿಜ್ಯ ಬೆಳೆಗಳು ಹೆಚ್ಚಾಗುವ ಅಪಾಯವಿದೆ . ಭಾರಿ ಕಾರ್ಪೊರೇಟ್ ಕಂಪೆನಿಗಳಿಗೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ಕಾಯಿದೆಗಳು ಇವಾಗಿವೆ . ರಾಜ್ಯದಲ್ಲಿ ಕೂಡ ಭೂಮಿತಿ ಕಾಯಿದೆಗೂ ತಿದ್ದುಪಡಿ ತಂದು ಬಡರೈತರ ಭೂಮಿಯನ್ನು ಕಬಳಿಸಲು ಅನುಕೂಲ ಮಾಡಲಾಗಿದೆ . ಜಾಗತೀಕರಣದ ಜಾರಿಯ ಮೂರು ದಶಕಗಳಲ್ಲಿ ಈಗಾಗಲೇ ೩ ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ವಿವರಿಸಿದರು.
ಆದ್ದರಿಂದ ಈ ಕಾಯಿದೆಗಳನ್ನು ಹಿಮ್ಮೆಟ್ಟಿಸಲು ರೈತರು ಹೋರಾಟದ ಹಾದಿ ಹಿಡಿದಿದ್ದಾರೆ . ಈ ಹೋರಾಟಕ್ಕೆ ಬೆಂಬಲಿಸಿ ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷವು ಜನಜಾಗೃತಿ ಮೂಡಿಸುತ್ತಾ ಹೋರಾಟದ ಕಟ್ಟುತ್ತಿದೆ . ಪಕ್ಷದ ರೈತ ಮುಂದಳವಾದ ಎಐಕೆಕೆಎಂಎಸ್ ( ಆರ್ ಕೆಎಸ್ ) ರಾಷ್ಟ್ರ ಮಟ್ಟದಲ್ಲಿ ಈ ಹೋರಾಟದ ಭಾಗವೇ ಆಗಿದೆ . ದೇಶದ ಹಲವು ರಾಜ್ಯಗಳಲ್ಲಿ ನಮ್ಮ ನಾಯಕರನ್ನು ಬಂಧಿಸಲಾಗಿದೆ . ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬೇಡಿಕೆಗಳು ಈಡೇರುವವರೆಗೂ ರಾಜ್ಯದ ಜನತ ರೈತರ ಪರವಾಗಿ ನಿಲ್ಲಬೇಕು ” ಎಂದು ಅವರು ಮನವಿ ಮಾಡಿದರು.