HomeKarnataka Newsವಿಸ್ತರಣೆಯಾಯ್ತು ಸಚಿವ ಸಂಪುಟ: ಕೊಪ್ಪಳ ಜಿಲ್ಲೆಗೆ ಈ ಸಲವೂ ತಪ್ಪಲಿಲ್ಲ ಸಂಕಟ!

ವಿಸ್ತರಣೆಯಾಯ್ತು ಸಚಿವ ಸಂಪುಟ: ಕೊಪ್ಪಳ ಜಿಲ್ಲೆಗೆ ಈ ಸಲವೂ ತಪ್ಪಲಿಲ್ಲ ಸಂಕಟ!

Spread the love

-ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಮರೆತ ಬಿಜೆಪಿ ಸರಕಾರಈ ಸಲವೂ ತೇಲಿ ಹೋಯ್ತು ಹಾಲಪ್ಪ ಆಚಾರ್ ಹೆಸರು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬಸವರಾಜ ಕರುಗಲ್
ಕಾಂಗ್ರೆಸ್-ಜೆಡಿಎಸ್‌ನಲ್ಲಿ ಶಾಸಕರಿದ್ದ ಅತೃಪ್ತರು ಬಿಜೆಪಿ ಸಖ್ಯ ಬೆಳೆಸಿ ಕಮಲ ಸರಕಾರ ಅಸ್ತಿತ್ವಕ್ಕೆ ತರಲು ಕೊಡುಗೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದಲೂ ಅನರ್ಹತೆಯ ಭೀತಿಯಿಂದ ಅರ್ಹತೆ ಗಳಿಸಿದ ಶಾಸಕರ ಋಣಸಂದಾಯದ ಕೆಲಸ ಇನ್ನೂ ನಡೆಯುತ್ತಲೇ ಇದೆ. ಪರಿಣಾಮ ಮೂಲ ಬಿಜೆಪಿಗರು ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸಂಕಟ ಪಡುವಂತಾಗಿದೆ.

ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆ ಕಾಲಕ್ಕೂ ವಲಸಿಗರಿಗೆ ಮಣೆ ಹಾಕಿದ್ದು ಮೂಲ ಬಿಜೆಪಿಯ ಶಾಸಕರಲ್ಲಿ ಬೇಗುದಿ ಹೆಚ್ಚಿಸಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಐವರು ಶಾಸಕರಲ್ಲಿ ಮೂವರು ಬಿಜೆಪಿಯಿಂದಲೇ ಚುನಾಯಿತರಾದವರು. ಮೊದಲನೇ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಜಿಲ್ಲಾವಾರು ಪ್ರಾತಿನಿಧ್ಯದಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಕೇಳಿ ಬಂದಿತ್ತು.

ಹಾಲಪ್ಪ ಆಚಾರ್ ಮಂತ್ರಿಯಾಗೇಬಿಟ್ಟರು ಎನ್ನುವಷ್ಟರಮಟ್ಟಿಗೆ ಬಿಂಬಿಸಲಾಯಿತು. ಆ ಸಂದರ್ಭದಲ್ಲಿ ಹಾಲಪ್ಪ ಆಚಾರ್ ದಿಢೀರನೆ ದೆಹಲಿಗೆ ಭೇಟಿ ನೀಡಿದ್ದು ಜಿಲ್ಲೆಗೆ ಸಚಿವ ಸ್ಥಾನ ದಕ್ಕುವ ಆಕಾಂಕ್ಷೆ ಗರಿ ಗೆದರಿತ್ತು. ಸಚಿವ ಸಂಪುಡ ವಿಸ್ತರಣೆಗೊಂಡಾಗ ಜಿಲ್ಲೆಗೆ ಭಾರೀ ನಿರಾಸೆ ಉಂಟಾಯಿತು.

ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸ್ಥಾನ ದಕ್ಕಿದ್ದು ಔರಾದ್ ಕ್ಷೇತ್ರದ ಪ್ರಭು ಚಹ್ವಾಣ್ ಮತ್ತು ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರಿಗೆ ಮಾತ್ರ. ಅದೂ ಚಹ್ವಾಣ್‌ಗೆ ಪಶು ಸಂಗೋಪನೆ ಖಾತೆ ಸಿಂಗ್‌ಗೆ ಅರಣ್ಯ ಖಾತೆ! ಈ ಬಾರಿ ಪ್ರಭು ಚಹ್ವಾಣ್ ಬದಲಾಗಿ ಕಲ್ಯಾಣ ಕರ್ನಾಟಕದ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇತ್ತು. ಸರಕಾರ ಬಯಸಿದರೆ ರಾಜೀನಾಮೆ ನೀಡುವುದಾಗಿ ಆನಂದ್ ಸಿಂಗ್ ಸಹ ಹೇಳಿದ್ದರು. ಈ ನಿಟ್ಟಿನಲ್ಲಿ ಹಾಲಪ್ಪ ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತು.

ಸಿಎಂಗೆ ಮನವಿ ಸಲ್ಲಿಸಿದ್ದೇವೆ
“ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕೊಪ್ಪಳ ಜಿಲ್ಲೆಗೆ ಆದ್ಯತೆ‌ ನೀಡುವಂತೆ ಮನವಿ ಮಾಡಿದ್ದೇವೆ. ಇರುವ ಮೂವರು ಬಿಜೆಪಿ ಶಾಸಕರಲ್ಲಿ ಯಾರಿಗಾದರೂ ಸರಿ, ಸಚಿವ ಸ್ಥಾನ ನೀಡುವಂತೆ ಕೇಳಿದ್ದೇವು. ಬೇರೆ ಪಕ್ಷದಿಂದ ಬಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮಿಸಿದವರನ್ನೂ ಈ ಸಂದರ್ಭದಲ್ಲಿ ಕಡೆಗಣಿಸಲಾಗದು. ಆ ನಿಟ್ಟಿನಲ್ಲಿ ನ್ಯಾಯ ಸಲ್ಲಿಸಲಾಗಿದೆ. ಸಚಿವ ಸ್ಥಾನ ಸಿಗದಿದ್ದರೇನಂತೆ ಶಾಸಕರಾಗಿಯೇ ಅಭಿವೃದ್ಧಿ ಕೆಲಸ ಮಾಡುವ ಶಿಸ್ತಿನ ಸಿಪಾಯಿಗಳು ಬಿಜೆಪಿ ಶಾಸಕರು.”

ಸ್ವತಃ ಹಾಲಪ್ಪ ಆಚಾರ್ ಅವರಿಗೆ ಈ ಬೆಳವಣಿಗೆ ಅಚ್ಚರಿ ಉಂಟು ಮಾಡಿತ್ತು. ಸಚಿವ ಸ್ಥಾನದ ಆಕಾಂಕ್ಷಿ ನಾನೊಬ್ಬನೇ ಅಲ್ಲ, ಬಿಜೆಪಿಯಿಂದ ಆಯ್ಕೆಯಾದ ಎಲ್ಲ ಶಾಸಕರು ಆಕಾಂಕ್ಷಿಗಳೇ ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ಕೆಲಸ ಮಾಡುವುದಾಗಿ ಹಾಲಪ್ಪ ಆಚಾರ್ ಹೇಳಿದ್ದರು. ಮಂಗಳವಾರ ರಾತ್ರಿವರೆಗೂ ಸಿಎಂ ಫೋನ್‌ಗಾಗಿ ಕಾದರೂ ಕರೆ ಬರಲಿಲ್ಲವಾದ್ದರಿಂದ ಎರಡನೇ ಬಾರಿ ಆಚಾರ್ ನಿರಾಸೆ ಅನುಭವಿಸಬೇಕಾಯ್ತು.

ಸಿಎಂಗೆ ಮನವಿ ಸಲ್ಲಿಸಿದ್ದೇವೆ
“ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕೊಪ್ಪಳ ಜಿಲ್ಲೆಗೆ ಆದ್ಯತೆ‌ ನೀಡುವಂತೆ ಮನವಿ ಮಾಡಿದ್ದೇವೆ. ಇರುವ ಮೂವರು ಬಿಜೆಪಿ ಶಾಸಕರಲ್ಲಿ ಯಾರಿಗಾದರೂ ಸರಿ, ಸಚಿವ ಸ್ಥಾನ ನೀಡುವಂತೆ ಕೇಳಿದ್ದೇವು. ಬೇರೆ ಪಕ್ಷದಿಂದ ಬಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮಿಸಿದವರನ್ನೂ ಈ ಸಂದರ್ಭದಲ್ಲಿ ಕಡೆಗಣಿಸಲಾಗದು. ಆ ನಿಟ್ಟಿನಲ್ಲಿ ನ್ಯಾಯ ಸಲ್ಲಿಸಲಾಗಿದೆ. ಸಚಿವ ಸ್ಥಾನ ಸಿಗದಿದ್ದರೇನಂತೆ ಶಾಸಕರಾಗಿಯೇ ಅಭಿವೃದ್ಧಿ ಕೆಲಸ ಮಾಡುವ ಶಿಸ್ತಿನ ಸಿಪಾಯಿಗಳು ಬಿಜೆಪಿ ಶಾಸಕರು.”

ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ.

ಅಸಮಾಧಾನ ಆಗಿರೋದು ನಿಜ, ಪಕ್ಷಕ್ಕಿಂತ ದೊಡ್ಡದಿಲ್ಲ
ಎರಡನೇ ಬಾರಿ ಸಂಪುಟ ವಿಸ್ತರಣೆ ಕಾಲಕ್ಕೆ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ವಿಶ್ವಾಸ ಇತ್ತು. ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ಇತ್ತು. ಆದರೆ ಈ ಬಾರಿಯೂ ಕೊಪ್ಪಳ ಜಿಲ್ಲೆಗೆ ಅನ್ಯಾಯವಾಗಿದೆ. ಅಸಮಾಧಾನ ಆಗಿರೋದು ನಿಜ, ಹಾಗೆಂದ ಮಾತ್ರಕ್ಕೆ ಪಕ್ಷಕ್ಕಿಂತ ದೊಡ್ಡದು ಬೇರೆನಿಲ್ಲ‌. ಇನ್ನೊಮ್ಮೆ ಸಿಎಂ ಅವರನ್ನು ಭೇಟಿ ಮಾಡ್ತಿವಿ.

-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!