ವ್ಯಾಟ್ಸಾಪ್ ಮೆಸೆಜ್ ಲೀಕ್: ಡ್ರಗ್ಸ್ ತನಿಖೆಯಲ್ಲಿ ದೀಪಿಕಾ, ಶ್ರದ್ಧಾ ಕಪೂರ್‌ಗೆ ನೋಟಿಸ್

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ‘ನೀವು ವ್ಯಾಟ್ಸಾಪ್ ಮಾಡಿದ ಸಂದೇಶ ನಿಮಗೆ ಮತ್ತು ನೀವು ಕಳಿಸಿದವರಿಗೆ ಬಿಟ್ಟು ಯಾರಿಗೂ ಗೊತ್ತಾಗಲ್ಲ. ನಮಗೇ (ವ್ಯಾಟ್ಸಾಪ್ ಕಂಪನಿಗೇ) ಅದು ಗೊತ್ತಾಗಲ್ಲ. ಆ ತರಹದ ಎನಲ್ರಿಪ್ಸನ್ ಸಾಫ್ಟವೇರ್ ಬಳಸುತ್ತಿದ್ದೇವೆ’ ಎಂದು ವ್ಯಾಟ್ಸಾಪ್ ಕಂಪನಿ ಗುರುವಾರ ಹೇಳಿದೆ.


ಒಮ್ಮಿಂದೊಮ್ಮೇಲೆ ಈ ಹೇಳಿಕೆ ಏಕೆ ಬಂತು? ಬಹುಷ: ಮಾದಕದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಅವರಿಗೆ ೨೦೧೭ರ ವ್ಯಾಟ್ಸಾಪ್ ಆಧಾರದಲ್ಲಿ ನೋಟಿಸ್ ನೀಡಿದ ನಂತರ ವ್ಯಾಟ್ಸಾಪ್‌ಗೆ ಈ ಹೇಳಿಕೆ ಕೊಡುವ ಅಗತ್ಯ ಬಿತ್ತು ಎನಿಸುತ್ತದೆ.


ಮೃತ ನಟ ಸುಶಾಂತ್ ಅವರ ಟ್ಯಾಲೆಂಟ್ ಮ್ಯಾನೇಜರ್ ಜಯಾ ಶಹಾ ಅವರ ಮೊಬೈಲ್ ಫೋನ್‌ನಿಂದ ಹೆಕ್ಕಿದ ೨೦೧೭ರ ವ್ಯಾಟ್ಸಾಪ್ ಸಂದೇಶಗಳ ಆಧಾರದಲ್ಲಿ ಎನ್‌ಸಿಬಿ ದೀಫಿಕಾ ಮತ್ತು ಶ್ರದ್ಧಾರಿಗೆ ನೋಟಿಸ್ ನೀಡಿದೆ. ಹೀಗಾಗಿ ನಮ್ಮ ವ್ಯಾಟ್ಸಾಪ್ ಸಂದೇಶ ಎಷ್ಟು ಸುರಕ್ಷಿತ ಎಂದು ಕೆಲವರು ಜಾಲತಾಣದಲ್ಲಿ ಪ್ರಶ್ನಿಸಿದ ನಂತರ ವ್ಯಾಟ್ಸಾಪ್ ಸಂಸ್ಥೆ ಮೇಲಿನ ಹೇಳಿಕೆ ನೀಡಿದೆ.


ಮಾದಕದ್ರವ್ಯ ನಿಯಂತ್ರಣ ದಳ ವ್ಯಾಟ್ಸಾಪ್ ಕಂಪನಿಯ ನೆರವು ಪಡೆದು ಹಳೆ ಸಂದೇಶಗಳನ್ನು ಹೆಕ್ಕಿದೆಯೆ? ಅಥವಾ ‘ಕ್ಲೋನಿಂಗ್ ಟೆಕ್ನಿಕ್’ ಬಳಸಿ ಸಂದೇಶಗಳನ್ನು ಪಡೆದುಕೊಂಡಿದೆಯೇ? ತನಿಖಾ ಸಂಸ್ಥೆಯೊಂದು ‘ಕ್ಲೋನಿಂಗ್ ಟೆಕ್ನಿಕ್’ ಬಳಸಬಹುದೆ ಎಂಬ ಪ್ರಶ್ನೆಗಳು ಈಗ ಚರ್ಚೆಗೆ ಬಂದಿವೆ. ಶನಿವಾರ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಎನ್‌ಸಿಬಿ ಮುಂದೆ ಹಾಜರಾಗಲಿದ್ದಾರೆ.


Spread the love

LEAVE A REPLY

Please enter your comment!
Please enter your name here