ಸಂಕನೂರ ಶಿಕ್ಷಣ ಕ್ಷೇತ್ರದ ಅಪಾರ ಅನುಭವಿ: ಮೆಣಸಿನಕಾಯಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿ, ಶಿಕ್ಷಕರು, ನೌಕರರು ಹಾಗೂ ಪದವೀಧರರ ಶ್ರೇಯೋಭಿವೃದ್ಧಿಗಾಗಿ ಸದಾ ಹೋರಾಟ ಮಾಡುತ್ತ ಬಂದು, ವಿಧಾನ ಪರಿಷತ್ ಸದಸ್ಯರಾಗಿ, ಈ ಕ್ಷೇತ್ರದ ಸಮರ್ಥ ಧ್ವನಿಯಾಗಿ, ಆರು ವರ್ಷಗಳ ಕಾಲ ಅನೇಕ ಸಾಧನೆಗಳನ್ನು ಸಾಕಾರಗೊಳಿಸಿದ ಪ್ರೊ. ಎಸ್.ವಿ. ಸಂಕನೂರ ಅವರನ್ನು ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆರಿಸಿ ತರಬೇಕು ಎಂದು ಬಿಜೆಪಿಯ ಯುವ ನಾಯಕ ಅನಿಲ ಪಿ. ಮೆಣಸಿನಕಾಯಿ ಹೇಳಿದರು.
ಅವರು ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪದವೀಧರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಧುರಿಣರಾದ ರಾಜು (ತೋಟಪ್ಪ) ಕುರಡಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕೋವಿಡ್-19 ನಡುವೆಯೂ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುತ್ತಿರುವರು. ಬಿಜೆಪಿ ಸರ್ಕಾರಗಳ ಸಾಧನೆ ಹಾಗೂ ಕಳೆದ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರೊ. ಸಂಕನೂರ ಅವರ ಸಾಧನೆಗಳನ್ನು ಪದವೀಧರ ಮತದಾರರು ಗಮನಿಸಿದ್ದಾರೆ. ಖಂಡಿತ ಈ ಬಾರಿ ಹೆಚ್ಚು ಮತಗಳನ್ನು ನೀಡುವ ಮೂಲಕ ಅವರನ್ನು ಮತ್ತೆ ಆರಿಸಿ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿ ಯುವ ನಾಯಕ ಅಮರನಾಥ ಗಡಗಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪದವೀಧರ ಮತದಾರರು ಪಾಲ್ಗೊಂಡಿದ್ದರು.

Advertisement

Spread the love

LEAVE A REPLY

Please enter your comment!
Please enter your name here